ಸಂಸ್ಮರಣಾ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ನಿವೃತ್ತ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ, ರಂಗ ನಿರ್ದೇಶಕರಾದ ಜಗನ್ ಪವಾರ್ ಬೇಕಲ್ ತಮ್ಮ ಲಕ್ಷ್ಮಣ್ ಉಪಸ್ಥಿತರಿದ್ದರು. 
ಜಿಲ್ಲೆ

ರಂಗಭೂಮಿಗೆ ತಿಂಗಳಾಯರ ಕೊಡುಗೆ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಅಭಿಪ್ರಾಯ
ಮಂಗಳೂರು : ತುಳುವಿನ ಮೊದಲ ಪ್ರಕಟಿತ ನಾಟಕ ಕೃತಿ 'ಜನ ಮರ್ಲ್' ನಾಟಕದ ಲೇಖಕ ಮಾಧವ ತಿಂಗಳಾಯರು, 30 ನಾಟಕಗಳನ್ನು ಬರೆದು ಸಾಹಿತ್ಯ ಸೇವೆಯ ಜೊತೆಗೆ ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಸುಧಾರಣೆಗೂ ಅನನ್ಯ ಸೇವೆ ಸಲ್ಲಿಸಿದವರು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ತುಳು ಸಾಹಿತ್ಯ ಅಕಾಡೆಮಿಯಲ್ಲಿ ಆಯೋಜಿಸಿದ್ದ ಮಾಧವ ತಿಂಗಳಾಯರ 113ನೇ ಜನ್ಮದಿನಾಚರಣೆಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, ತಿಂಗಳಾಯರ ಎಲ್ಲ ತುಳು ನಾಟಕಗಳು ವೈಚಾರಿಕ ಪ್ರಖರತೆಯಿಂದ ಕೂಡಿದ್ದವು ಎಂದರು.
ರಂಗ ನಿರ್ದೇಶಕರಾದ ಜಗನ್ ಪವಾರ್ ಬೇಕಲ್ ತಮ್ಮ ಲಕ್ಷ್ಮಣ್, ತಿಂಗಳಾಯರ ಕುಟುಂಬಸ್ಥ ಪ್ರೇಮಚಂದ್ರ ತಿಂಗಳಾಯ ಅವರು ಮಾಧವ ತಿಂಗಳಾಯರ ಸಾಮಾಜಿಕ ಮತ್ತು ಸಾಹಿತಿಕ ಕೆಲಸಗಳನ್ನು ಸ್ಮರಿಸಿದರು.
ತುಳು ಪರಿಷತ್ತಿನ ಅಧ್ಯಕ್ಷ ಶುಭೋದಯ ಆಳ್ವ, ದುರ್ಗಾ ಪ್ರಸಾದ್, ಹೊನ್ನಯ್ಯ, ಪತ್ರಕರ್ತರಾದ ರಮೇಶ್ ಮಂಜೇಶ್ವರ, ಪ್ರಕಾಶ್ ಪುತ್ತೂರು, ಸಂಗೀತ ಕಲಾವಿದರಾದ ರತ್ನಾವತಿ ಜೆ. ಬೈಕಾಡಿ, ನಾದ ಮಣಿನಾಲ್ಕೂರು, ಲೇಖಕಿ ರೂಪಕಲಾ ಆಳ್ವ, ಸಂಕೇತದ ಅಧ್ಯಕ್ಷ ಹರೀಶ್ ಶಕ್ತಿನಗರ ಉಪಸ್ಥಿತರಿದ್ದರು. ಉಪನ್ಯಾಸಕ ರಘು ಇಡ್ಕಿದು ವಂದಿಸಿದರು.