ಜಿಲ್ಲೆ

ಡಿ.12ರಂದು ರಾಗ ಸಂಯೋಜನೆ ಕಾರ್ಯಾಗಾರ

ಸೌಮ್ಯ ಆರ್

ಕಾಸರಗೋಡು: ರಂಗಚಿನ್ನಾರಿ ಇದರ ಸಹ ಸಂಸ್ಥೆ ಸ್ವರಚಿನ್ನಾರಿ ಏರ್ಪಡಿಸುವ ರಾಗಾಲಾಪ ರಾಗ ಸಂಯೋಜನೆಯ ಕುರಿತಾದ ಒಂದು ದಿನದ ಕಾರ್ಯಾಗಾರ ಡಿ.12ರಂದು ಬೆಳಗ್ಗೆ 9.30 ರಿಂದ ಸಂಜೆ 5ರವರೆಗೆ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ನೇತೃತ್ವದಲ್ಲಿ ನಡೆಯಲಿದೆ. ಹೊಸ ಹಾಡುಗಳಿಗೆ ರಾಗ ಸಂಯೋಜನೆ ಮಾಡುವುದು ಹೇಗೆ ಎಂಬ ಕುರಿತಾಗಿ, ಅದನ್ನು ಶಿಬಿರಾರ್ಥಿಗಳಿಂದ ಹಾಡಿಸಿ ಕಲಿಸುವ ಕಾರ್ಯಕ್ರಮವಾಗಿರುವುದರಿಂದ ಕಾಸರಗೋಡಿನ ಕವಿಗಳಿಂದ ಹಾಡುಗಳನ್ನು ಆಹ್ವಾನಿಸಲಾಗಿದೆ. ಕಳುಹಿಸಬೇಕಾದ ಸಂಖ್ಯೆ: 6282731359-ಶ್ರೀಕೃಷ್ಣಯ್ಯ ಅನಂತಪುರ(ಖ್ಯಾತ ಕವಿ), ಗೌರವಾಧ್ಯಕ್ಷರು-ಸ್ವರಚಿನ್ನಾರಿ ಕಾಸರಗೋಡು.

ಆಯ್ಕೆ ನಿಯಮ

ಹಾಡುಗಳು 2 ಚರಣ ದಾಟಬಾರದು(12 ಸಾಲುಗಳು ). ಆಯ್ದ ಉತ್ತಮ 2 ಭಾವಗೀತೆಗಳಿಗೆ ಪ್ರಾಧಾನ್ಯತೆ ನೀಡಲಾಗುವುದು. ಈ ಮೊದಲು ರಚಿಸಿ ಪ್ರಕಟಿಸಿದ ಹಾಡುಗಳನ್ನು ಸ್ವೀಕರಿಸಲಾಗುವುದಿಲ್ಲ. ಖಡ್ಡಾಯವಾಗಿ ಹೊಸ ರಚನೆ ಆಗಿರಬೇಕು. ಹಾಡುಗಳನ್ನು ನ.20ರ ಒಳಗಾಗಿ ಈ ಕೆಳಗೆ ನೀಡಿರುವ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು ಎಂದು ಸೂಚಿಸಲಾಗಿದೆ. ಸಂಘಟಕರ ತೀರ್ಮಾನ ಅಂತಿಮವಾಗಿರುತ್ತದೆ.