ಕನಕಗಿರಿ ತಾಲೂಕಿನ ತಿಪ್ಪನಾಳ ಬಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೆರೆಯನ್ನು ತಾಪಂ ಇಒ ರಾಜಶೇಖರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಪಿಡಿಒ ಲಕ್ಷ್ಮಣ ಇತರರಿದ್ದರು. 
ಜಿಲ್ಲೆ

ತೆಪ್ಪ ಬಳಸಿ ತಿಪ್ಪನಾಳ ಕೆರೆ ಸ್ವಚ್ಛಗೊಳಿಸಿ

Kopala - Desk - Eraveni

ಕನಕಗಿರಿ: ಪಟ್ಟಣ ಸೇರಿ 9 ಗ್ರಾಮಗಳಿಗೆ ಕುಡಿವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯ ನೀರು ಸಂಗ್ರಹದ ತಿಪ್ಪನಾಳ ಕೆರೆಗೆ ಶುಕ್ರವಾರ ತಾಪಂ ಇಒ ರಾಜಶೇಖರ ಭೇಟಿ ನೀಡಿ ಪರಿಶೀಲಿಸಿದರು.

ಕೆರೆಯಲ್ಲಿ ಒಡೆದು ಹೋಗಿರುವ ಒಡ್ಡು, ನೀರು ಪಾಲಾಗಿರುವ ಹಾಸುಬಂಡೆಗಳನ್ನು ಪರಿಶೀಲಿಸಿದರು. ಕೆರೆಯಲ್ಲಿನ ಪಾಚಿ ಕಂಡು ಬೇಸರ ವ್ಯಕ್ತಪಡಿಸಿದರು. ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛಗೊಳಿಸಲು ಸಿಬ್ಬಂದಿಗೆ ತಿಳಿಸಿ, ಬೇಕಾದ ಪರಿಕರಗಳನ್ನು ಒದಗಿಸಲು ಸುಳೇಕಲ್ ಗ್ರಾಪಂ ಪಿಡಿಒ ಲಕ್ಷ್ಮಣಗೆ ಸೂಚಿಸಿದರು.

ತೆಪ್ಪ ತಂದು ಪೂರ್ಣಪ್ರಮಾಣದಲ್ಲಿ ಪಾಚಿ ಸ್ವಚ್ಛಗೊಳಿಸಲು ಕ್ರಮವಹಿಸುವಂತೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯವಿಭಾಗದ ಎಇಇ ದೇವಪ್ಪ ಕಟ್ಟಿ ಅವರಿಗೆ ತಿಳಿಸಿದರು. ಅಲ್ಲದೇ ಒಡೆದಿರುವ ಕೆರೆ ಒಡ್ಡು ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ದುರಸ್ತಿಗೊಳಿಸಲಾಗುವುದು ಎಂದರು. ತಿಪ್ಪನಾಳ ಕೆರೆ ನಿರ್ವಹಣೆಗೆ ಗುತ್ತಿಗೆದಾರರ ಅಸಡ್ಡೆ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.