ಬೇಲೂರು : ಮಲೆನಾಡಿನ ಸಕಲೇಶಪುರ, ಆಲೂರು-ಬೇಲೂರು ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಉಪಟಳ ನೀಡುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಕೆಲ ಪುಂಡಾನೆಗಳನ್ನು ಸರ್ಕಾರದ ಆದೇಶದಂತೆ ಹಿಡಿದು ಸ್ಥಳಾಂತರಿಸಲಾಗುತ್ತಿದೆ.
ಪಳಗಿದ 6 ಸಾಕಾನೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ಸಾಂಗವಾಗಿ ಸಾಗಿದೆ. ತಾಲೂಕಿನ ಬಿಕ್ಕೋಡು ಹೋಬಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಉಪಟಳ ನೀಡುತ್ತಿದ್ದ ಎರಡು ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ವಿವಿಧೆಡೆ ಪ್ರತ್ಯೇಕ ಗುಂಪಿನಲ್ಲಿರುತಿದ್ದ ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಮಾಹಿತಿ ಪಡೆದು ಇತರೆ ಕಾಡಾನೆಗಳಿರುವ ಸ್ಥಳ ಗುರುತಿಸಿ ಅವುಗಳಿಗೂ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಸಿಬ್ಬಂದಿ ಮುಂದಾಗುತ್ತಿದ್ದಾರೆ.
ಸಾಕಷ್ಟು ಉಪಟಳ ನೀಡುತಿದ್ದ ಮಕ್ನಾ ಎಂಬ ಗಂಡು ಕಾಡಾನೆಯನ್ನು ಅರೇಹಳ್ಳಿ ಹೋಬಳಿ ವಾಟೆಹಳ್ಳಿ ಗ್ರಾಮದ ಕಾಫಿ ತೋಟಗಳ ನಡುವೆ ಗುರುವಾರ ಸಂಜೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬೇರೆ ಅರಣ್ಯ ಕ್ಕೆ ್ಕ ಸ್ಥಳಾಂತರಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಾರ್ಯಚರಣೆಯಲ್ಲಿ ಅರಿವಳಿಕೆ ಶಾರ್ಪ್ ಶೂಟರ್‌ಗಳು, ತಜ್ಞರು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದಾರೆ.