ಜಿಲ್ಲೆ

ರಾಧಾಕೃಷ್ಣ ಸಂಸ್ಥೆಯ ಕಟ್ಟಡ ಉದ್ಘಾಟನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಲೋಹಿಯಾನಗರ ಪವನ ಸ್ಕೂಲ್ ಬಳಿ ನಿರ್ಮಾಣವಾಗಿರುವ ರಾಧಾಕೃಷ್ಣ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಹಾಗೂ ಎಜ್ಯುಕೇಶನ್ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಅ. 8ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗದೆ ಎಂದು ಸಂಸ್ಥೆಯ ಅಧ್ಯಕ್ಷ ಮನೀಷ್ ಶಿಂಧೆ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 37ನೇ ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯ ಸವಿನೆನಪಿಗಾಗಿ ಹಾಗೂ ದಿ. ರಾಧಾಬಾಯಿ ಶಿಂಧೆ ಇವರ ಸ್ಮರಣಾರ್ಥ ವಿವಿಧ ಕ್ಷೇತ್ರದ 37 ಸಾಧಕರನ್ನು ಗುರುತಿಸಿ ರಾಜ್ಯ ಮಟ್ಟದ ಸಾಧಕರು ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದಿಪ ಶೆಟ್ಟರ್, ಮೇಯರ್ ವೀಣಾ ಬರದ್ವಾಡ ಇತರರು ಪಾಲ್ಗೊಳ್ಳುವರು.
ಒಂದೇ ಸೂರಿನಡಿ ಸರ್ವ ಕಲೆಗಳನ್ನು ಕಲಿಸುವ ವ್ಯವಸ್ಥೆ ತರಬೇಕೆಂಬ ತಮ್ಮ ಬಹುದಿನದ ಕನಸು ಇದೀಗ ಈಡೇರಿದೆ. ಸಾಂಸತಿಕ, ಸಾಹಸ, ಕ್ರೀಡೆ, ಸಮಾಜ ಸೇವೆ ಮುಂತಾದ ಸೇವೆಗಳನ್ನು ಇಲ್ಲಿ ಕಲಿಸಲಾಗುತ್ತದೆ ಎಂದರು.

ರಾಧಾಕೃಷ್ಣ ಸಂಸ್ಥೆ, ಸ್ವರ್ಣಮಯೂರಿ, ಕಲಾಲೋಕ, ಸದಾನಂದ ಬಂಗೆಣ್ಣನವರ ಮತ್ತು ತಂಡ ಹಾಗೂ ಅಹಲ್ಯಾ ಭಜನಾ ಮಂಡಳಿಗಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸಂಸ್ಥೆಯ ಸದಸ್ಯರಾದ ಬಸವರಾಜ ಚಕ್ರಸಾಲಿ, ದಾಕ್ಷಾಯಿನಿ ಇದ್ದರು.