ಶ್ರೀರಂಗಪಟ್ಟಣ: ತಾಲೂಕಿನ ಮೇಳಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳ ಬೆಂಬಲಿತೆ ರಾಧಾ ಮಹೇಶ್ ಆಯ್ಕೆಯಾದರು.
ಗ್ರಾಮದ ಪಂಚಾಯಿತಿಯಿಗೆ ಈ ಹಿಂದಿನ ಅಧ್ಯಕ್ಷೆಯಾಗಿದ್ದ ರತ್ನಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆದಿದ್ದು, ರಾಧಾ ಮಹೇಶ್ ಹೊರತುಪಡಿಸಿ ಇನ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಬಿಜೆಪಿ ಮುಖಂಡ ಟಿ.ಶ್ರೀಧರ್ ನೂತನ ಅಧ್ಯಕ್ಷೆ ರಾಧಾ ಮಹೇಶ್ ಅವರಿಗೆ ಅಭಿನಂದಿಸಿದ್ದು, ಸದಸ್ಯರು ಹಾಗೂ ಬೆಂಬಲಿಗರು ಎಲ್ಲರಿಗೂ ಹೂಮಾಲೆ ಹಾಕಿ ಶುಭಕೋರಿ ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಪಂನ ಉಪಾಧ್ಯಕ್ಷ ವೆಂಕಟೇಶ್, ನಿಕಟಪೂರ್ವ ಅಧ್ಯಕ್ಷೆ ರತ್ನಮ್ಮ, ಮಾಜಿಅಧ್ಯಕ್ಷ ಬೆಟ್ಟೇಗೌಡ, ಸದಸ್ಯರಾದ ಅನುಪಮಾ, ಸೌಮ್ಯಾ, ಧನರಾಜ್, ಈರೇಗೌಡ, ಸದಾಶಿವ, ಬಾಲರಾಜು, ಪ್ರೇ,ಮಾ, ಮಮತಾ, ಮೋಹನ್ ಕುಮಾರ್, ಸುನಂದಮ್ಮ ಮುಖಂಡರಾದ ರಾಮೇಗೌಡ, ಪ್ರದೀಪ್ ಇತರರು ಇದ್ದರು.