ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನ ಕಾರ್ಯಕ್ರಮದಲ್ಲಿ ಬಿಎಚ್ ಇಒ ಗಂಗಮ್ಮ ಮಾತನಾಡಿದರು. ಪ್ರಮುಖರಾದ ಡಾ.ಚಂದ್ರಶೇಖರ, ಡಾ.ಜಾಫರ್ ಸಾಬ್, ರವೀಂದ್ರ, ಸೈಯದ್ ಅಬ್ಬಾಸ, ಬಸಪ್ಪ ಇತರರಿದ್ದರು. 
ಜಿಲ್ಲೆ

ರೇಬಿಸ್ ತಡೆಗೆ ಲಸಿಕೆ ಅವಶ್ಯ

Kopala - Desk - Eraveni

ಅಳವಂಡಿ: ರೇಬಿಸ್ ಕಾಯಿಲೆ ಸೋಂಕಿತ ಪ್ರಾಣಿ ಕಚ್ಚುವಿಕೆ ಅಥವಾ ಪರಚುವಿಕೆಯಿಂದ ಹರಡಲಿದ್ದು, ಲಸಿಕೆ ಹಾಕಿಸಿಕೊಳ್ಳುವುದರಿಂದ ತಡೆಯಬಹುದು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ಸೇವಾ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಡೆದ ವಿಶ್ವ ರೇಬಿಸ್ ದಿನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ರೇಬಿಸ್ ಮಿದುಳು ಮತ್ತು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಸೋಂಕಗಿದೆ. ಇದು ಲೈಸಾವೈರಸ್‌ನಿಂದ ಉಂಟಾಗುತ್ತದೆ. ತಲೆನೋವು ಮತ್ತು ಜ್ವರ ಇದರ ಲಕ್ಷಣವಾಗಿದೆ. ರೇಬಿಸ್ ಮಾರಕ ಕಾಯಿಲೆಯಾಗಿದ್ದು, ಸಮಯೋಚಿತ ಚಿಕಿತ್ಸೆ ಸೋಂಕನ್ನು ತಡೆಯುತ್ತದೆ ಎಂದರು.

ವೈದ್ಯಾಧಿಕಾರಿ ಚಂದ್ರಶೇಖರ ಮೇಟಿ, ಡಾ.ಜಾಫರ್ ಸಾಬ್, ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ, ಆರೋಗ್ಯ ಸುರಕ್ಷತಾಧಿಕಾರಿ ಸಾವಿತ್ರಿ ಹಂಚಿನಾಳ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್, ಪ್ರಮುಖರಾದ ಸೈಯದ್ ಅಬ್ಬಾಸ, ಬಸಪ್ಪ ಗಾಳಿ, ರಾಜೇಶ್ವರಿ ಕಂಪ್ಲಿ, ದಿಲ್ ಖುಷ್ಬು, ಸಿಬ್ಬಂದಿ ನಾಗರಾಜ, ಶಿವಕುಮಾರ, ಶಿಲ್ಪಾ ಇತರರಿದ್ದರು.