ಜಿಲ್ಲೆ

ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕ

ರಬಕವಿ/ಬನಹಟ್ಟಿ: ಹಬ್ಬಗಳನ್ನು ಆಚರಿಸುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯ ಎಂದು ಬನಹಟ್ಟಿ ನಗರದ ಸೋಮವಾರಪೇಟೆ ಸಮಸ್ತ ದೈವ ಮಂಡಳಿ ಉಪಾಧ್ಯಕ್ಷ ಮಲ್ಲಿಕಾರ್ಜುನ ತುಂಗಳ ತಿಳಿಸಿದರು.

ವಿಜಯದಶಮಿ ನಿಮಿತ್ತ ಅವಳಿ ನಗರದ ಸೋಮವಾರ ಪೇಟೆಯ ಹಿರೇಮಠದ ಹತ್ತಿರ ಇರುವ ಬನ್ನಿ ಮರಕ್ಕೆ ಭಾನುವಾರ ಪೂಜೆ ಸಲ್ಲಿಸಿ ಮಾತನಾಡಿ, ಶಾಂತಿ ಸೌಹಾರ್ದತೆಯ ಸಂಕೇತವಾದ ಹಬ್ಬಗಳು ನಮ್ಮಲ್ಲಿಯ ದ್ವೇಷ ಅಳಿಸಿ ಸಹೋದರತೆಯ ಬಾಂಧವ್ಯ ಬೆಸೆಯುತ್ತವೆ. ಅವುಗಳ ಮಹತ್ವ ಕುರಿತು ಪ್ರತಿಯೊಬ್ಬರಿಗೂ ತಿಳಿಸಬೇಕು. ಎಲ್ಲ ಹಬ್ಬಗಳನ್ನು ಎಲ್ಲರೂ ಕೂಡಿ ಆಚರಿಸುವಂತಾಗಬೇಕು ಎಂದರು.

ಮಹಾಶಾಂತ ಶೆಟ್ಟಿ ಮಾತನಾಡಿದರು. ಚರಂತಯ್ಯ ಹಿರೇಮಠ, ಮಹಾಂತಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ರಾಚಯ್ಯ ಮಠಪತಿ, ಚನ್ನಮಲ್ಲಯ್ಯ ಮಠಪತಿ, ಕಲ್ಲಯ್ಯ ಮಠಪತಿ, ಸುರೇಶ ಗಣೇಶನವರ, ಡಾ.ಮಲ್ಲಿಕಾರ್ಜುನ ಭಾವಲತ್ತಿ, ಪ್ರಶಾಂತ ಕೊಳಕಿ, ಮಲ್ಲಿನಾಥ ಕಕಮರಿ, ಪ್ರಭಾಕರ ಮೊಳೇದ, ಪ್ರಶಾಂತ ಬಿದರಿ, ಕಿರಣ ಆಳಗಿ, ಚನ್ನಪ್ಪ ಗುಣಕಿ, ಮಲ್ಲು ಕೊಳಕಿ, ಶಿವಕುಮಾರ ಬಾಗೇವಾಡಿ, ಶಿವನಿಂಗಪ್ಪ ಶಿರಹಟ್ಟಿ, ರೇವಪ್ಪ ಗುಣಕಿ, ಶ್ರೀಶೈಲ ಶಿರೋಳ, ಸಂಗಪ್ಪ ಹಾದಿಮನಿ, ದೇವೆಂದ್ರ ಬಸೆಟ್ಟಿ ಸೇರಿ ನೂರಾರು ಜನರು ಇದ್ದರು.