ಜಿಲ್ಲೆ

ವನಿತೆಯರು ಕೀಳರಿಮೆ ತೊರೆಯಲಿ

ರಬಕವಿ/ಬನಹಟ್ಟಿ: ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಔದ್ಯೋಗಿಕ ಕ್ಷೇತ್ರ ಸೇರಿ ಎಲ್ಲದರಲ್ಲಿಯೂ ಮಹಿಳೆ ಗೌರವಕ್ಕೆ ಪಾತ್ರಳಾಗಿದ್ದಾಳೆ ಎಂದು ಬನಹಟ್ಟಿ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಎಚ್. ಶ್ವೇತಾ ಹೇಳಿದರು.

ಸಮೀಪದ ರಾಂಪುರ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಕೀಳರಿಮೆ ತೊರೆದು ಪುರುಷನಿಗೆ ಸರಿಸಮಾನಳಾಗಿ ಬದುಕಲು ಮುಂದಾಗಬೇಕೆಂದರು.

ಸಂಸ್ಥೆ ಅಧ್ಯಕ್ಷೆ ಡಿ.ಎಂ. ನದ್ಾ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಸಿ.ಎಂ. ನೇಮಗೌಡ, ರವೀಂದ್ರ ಸಂಪಗಾಂವಿ, ಸಿದ್ದಪ್ಪ ಮೇಣಿ, ಶ್ರೀಶೈಲ ಬುರ್ಲಿ, ಎಸ್.ವಿ. ಮೇಣಿ, ಎಸ್.ಪಿ. ಹೂಗಾರ, ಬಸವರಾಜ ಹನಗಂಡಿ, ಎಸ್.ಎಸ್. ಸಿಂಗನ್, ಶಿವಾನಂದ ಕರಡಿ, ಶಕೀಲ ನದ್ಾ, ಪರಮಾನಂದ ಗೌರೋಜಿ ವೇದಿಕೆ ಮೇಲಿದ್ದರು.

ನ್ಯಾಯಾಧೀಶರಾದ ಎಚ್. ಶ್ವೇತಾ, ಕೆಎಎಸ್‌ನಲ್ಲಿ ಸಾಧಕಿ ಉಮಾಶ್ರೀ ಕೋಳಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಡಿ.ಎ. ಮಂಡಿ, ಮಾಹೇಶ್ವರಿ ಸಖಿ ಮಂಡಳಿ ಅಧ್ಯಕ್ಷೆ ನೀತಾ ದೇವರಾಜ ರಾಠಿ, ಶಿಕ್ಷಕಿ ಡಿ.ಎ. ಕಂಕಣಮೇಲಿ ಅವರನ್ನು ಸನ್ಮಾನಿಸಲಾಯಿತು.

ಸುಜಾತಾ ಗೊಬ್ಬಾಣಿ, ಜಿ.ಎಸ್. ಕಲಬುರ್ಗಿ, ಬಿ.ಪಿ. ನುಚ್ಚಿ, ಶೈಲಾ ಮಿರ್ಜಿ, ನಿರ್ಮಲಾ ಮಿರ್ಜಿ, ಜೆ.ಎಸ್. ಕಟ್ಟಿಮನಿ, ವಿ.ಎಸ್. ನಡುವಿನಮನಿ, ಬಿ.ಬಿ. ಕಲ್ಯಾಣಿ, ಬಿ.ಎಸ್. ಹುರಕಡ್ಲಿ, ಬಿ.ಆರ್. ಚಾಂಬಾರ, ವಂದನಾ ಪಾಯನ್ನವರ, ಬಿ.ವಿ. ತೆಗ್ಗಿ ಉಪಸ್ಥಿತರಿದ್ದರು.

EndFragment