ರಬಕವಿ/ಬನಹಟ್ಟಿ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಳೆದ ಮಾ.3 ರಂದು ವಿಧಾನ ಸಭೆ ಪ್ರಶ್ನೋತ್ತರ ವೇಳೆ ಬೇಡ ಜಂಗಮ ಪರಿಶಿಷ್ಟ ಜಾತಿಗೆ ಸಂಬಂಧಿಸಿ ಬಾಲಿಷ ಹೇಳಿಕೆ ನೀಡಿದ್ದು ಖಂಡನೀಯ ಎಂದು ರಬಕವಿ ಬನಹಟ್ಟಿ ಬೇಡ ಜಂಗಮ ಹಾಗೂ ವೀರ ಮಹೇಶ್ವರ ಜಂಗಮ ಸಮಾಜ ಅಧ್ಯಕ್ಷ ಈಶ್ವರ ಕಾಡದೇವರ ಹೇಳಿದರು.
ರಬಕವಿ ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರ ಮೂಲಕ ಸಮಾಜದ ಪರವಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಮುಖಂಡ ಶಿವಾನಂದ ಬಾಗಲಕೋಟಮಠ ಮಾತನಾಡಿ, ದಾಖಲೆಗಳು ಬೇಕಾದಲ್ಲಿ ರಾಜ್ಯ ಬೇಡ ಜಂಗಮರ ಸಂಘದ ಅಧ್ಯಕ್ಷ ಡಾ. ಶಾಂತವೀರ ಸ್ವಾಮಿಗಳಿಂದ ಪಡೆದು ಬೇಡ ಜಂಗಮರಿಗೆ ಉಪಮುಖ್ಯಮಂತ್ರಿ ಅವರು ನ್ಯಾಯ ಒದಗಿಸಿ ಕೊಡಬೇಕು ಎಂದರು.
ಸಮಾಜದ ಮುಖಂಡರಾದ ಈಶ್ವರಯ್ಯ ಕಾಡದೇವರ, ಚನ್ನಯ್ಯ ಲಿಂಗದ, ಸೋಮಯ್ಯ ಹಿರೇಮಠ, ದಾನಯ್ಯ ಬಾಗಲಕೋಟಮಠ, ಬಸಯ್ಯ ವಸದ, ಮಲ್ಲಯ್ಯ ತುಂಗಳಮಠ, ಶಿವರುದ್ರಯ್ಯ ಕಾಡದೇವರ, ದುಂಡಯ್ಯ ಕಾಡದೇವರ, ಶಂಕ್ರಯ್ಯ ಅಂಗಡಿ, ಕಾಳಯ್ಯ ಪೂಜಾರಿ, ವಿಶ್ವನಾಥ ರಂಜಣಗಿ, ಸಂಗಯ್ಯ ಮಠಪತಿ, ಮಳಯ್ಯ ಕಾಡದೇವರ, ಗಿರಿಮಲ್ಲಯ್ಯ ಕಾಡದೇವರ, ವಿಶ್ವಜ ಕಾಡದೇವರ ಸೇರಿ ಅನೇಕರಿದ್ದರು.
EndFragment