ಜಿಲ್ಲೆ

ಗುರಿಯೆಡೆಗೆ ಆಸಕ್ತಿ ಮುಖ್ಯ

ರಬಕವಿ/ಬನಹಟ್ಟಿ: ಮಣಿಪಾಲ ವಿಶ್ವವಿದ್ಯಾಲಯದಿಂದ ಏರೋನಾಟಿಕಲ್ ವಿಭಾಗದಲ್ಲಿ ಬಂಗಾರದ ಪದಕ ಪಡೆದ ನಗರದ ಅಶ್ವಿನಿ ರಾಠಿ ಅವರನ್ನು ಬನಹಟ್ಟಿಯಲ್ಲಿ ಮಕ್ಕಳ ಸಂಘದವರು ಸನ್ಮಾನಿಸಿದರು.

ಅಶ್ವಿನಿ ರಾಠಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿಶ್ಚಿತವಾದ ಗುರಿಹೊಂದಿ ನಾವು ಕಾರ್ಯೋನ್ಮುಖರಾಗಬೇಕು. ಚಿತ್ತಗೊಟ್ಟು ಓದಬೇಕು. ಆಗ ಓದಿದ್ದೆಲ್ಲ ಅರ್ಥವಾಗುತ್ತದೆ. ಮೇಲಾಗಿ ನಮಗೆ ನಮ್ಮ ಗುರಿಯೆಡೆಗೆ ಆಸಕ್ತಿ ಮುಖ್ಯ ಎಂದು ಹೇಳಿದರು.

ಸೃಷ್ಟಿ ಪಾಲಬಾಂವಿ ಮಾತನಾಡಿದರು. ಮಕ್ಕಳ ಸಂಗಮದ ಅಧ್ಯಕ್ಷ, ಹಿರಿಯ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಾದ ಋತು, ಸೃಜನ, ಪೂರ್ವಿ, ಸಮರ್ಥ, ಓಂಕಾರ, ಶ್ರೇಯಾ, ಪ್ರಣವ, ಶ್ರೇಯಸ್ ಇತರರು ಇದ್ದರು.