DCIM100MEDIADJI_0063.JPG 
ಜಿಲ್ಲೆ

ಗ್ರಾಪಂಗಳ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಚುನಾವಣಾಧಿಕಾರಿಗಳ ನೇಮಕ

ರಾಮನಗರ: ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಚುನಾವಣಾಧಿಕಾರಿಯನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ 5 ತಾಲೂಕುಗಳ ಅವಧಿ ಮುಗಿದ ನಂತರ ಒಂದು ವಾರದ ಒಳಗೆ ಚುನಾವಣೆ ನಡೆಸುವಂತೆ ವಿವಿಧ ಇಲಾಕೆ ಅಧಿಕಾರಿಗಳನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ರಾಮನಗರ ತಾಲೂಕಿನ 20, ಚನ್ನಪಟ್ಟಣ ತಾಲೂಕಿನ 32, ಕನಕಪುರ ತಾಲೂಕಿನ 31, ಹಾರೋಹಳ್ಳಿ ತಾಲೂಕಿನ 7 ಹಾಗೂ ಮಾಗಡಿ ತಾಲೂಕಿನ 32 ಗ್ರಾಮ ಪಂಚಾಯಿತಿಗಳ ಮೊದಲ ಅವಧಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಧಿ ಮುಕ್ತಾಯವಾಗಲಿದೆ. ಇವುಗಳಿಗೆ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ.

ಮುಕ್ತಾಯವಾಗುವ ದಿನಾಂಕ:

ರಾಮನಗರ: ಆ.8ಕ್ಕೆ  ಜಾಲಮಂಗಲ,  ಆ.9ಕ್ಕೆ ಕೈಲಾಂಚ, ಗೋಪಹಳ್ಳಿ, ಬನ್ನಿಕುಪ್ಪೆ (ಬಿ), ಬಿಳಗುಂಬ, ಮಾಯಗಾನಹಳ್ಳಿ, ದೊಡ್ಡಗಂಗವಾಡಿ, ಕೂಟಗಲ್, ಆ.10ಕ್ಕೆ ಹುಣಸನಹಳ್ಳಿ, ಅಕ್ಕೂರು, ಆ.11ಕ್ಕೆ ಬನ್ನಿಕುಪ್ಪೆ (ಕೆ), ಹುಲಿಕೆರೆ ಗುನ್ನೂರು, ಭೈರಮಂಗಲ, ಮಂಚನಾಯ್ಕನಹಳ್ಳಿ, ಹರೀಸಂದ್ರ, ಸುಗ್ಗನಹಳ್ಳಿ, ಲಕ್ಷ್ಮೀಪುರ, ಶ್ಯಾನಬೋಗನಹಳ್ಳಿ ಹಾಗೂ ಆ.14ಕ್ಕೆ ವಿಭೂತಿಕೆರೆ, ಕಂಚುಗಾರನಹಳ್ಳಿ ಗ್ರಾಪಂಗಳ ಅಧ್ಯಕ್ಷ ಉಪಾಧ್ಯಕ್ಷರ ಮೊದಲ ಅವಧಿ ಮುಕ್ತಾಯವಾಗಲಿದೆ.

ಚನ್ನಪಟ್ಟಣ: ಆ.9ಕ್ಕೆ ಮುದಗೆರೆ, ನಾಗವಾರ, ಹಾರೋಕೊಪ್ಪ, ಜೆ ಬ್ಯಾಡರಹಳ್ಳಿ, ಹೊಂಗನೂರು, ಸಿಂಗರಾಜಪುರ, ಆ.10ಕ್ಕೆ ಎಂ.ಬಿ.ಹಳ್ಳಿ, ಬೇವೂರು, ಅಕ್ಕೂರು, ಚಕ್ಕೆರೆ, ಮೈಲನಾಯಕನಹಳ್ಳಿ, ಮತ್ತೀಕೆರೆ, ಮಳೂರುಪಟ್ಟಣ, ಬಾಣಗಹಳ್ಳಿ, ನೀಲಸಂದ್ರ, ಕೋಡಂಬಳ್ಳಿ, ಭೂಹಳ್ಳಿ, ರಾಂಪುರ, ಆ.11ಕ್ಕೆ ತಿಟ್ಟಮಾರನಹಳ್ಳಿ, ಮಳೂರು, ಸುಳ್ಳೇರಿ, ಮಾಕಳಿ, ದಶವಾರ, ಎಚ್.ಬ್ಯಾಡರಹಳ್ಳಿ, ಕೂಡ್ಲೂರು, ಸೋಗಾಲ, ಇಗ್ಗಲೂರು, ವಂದಾರಗುಪ್ಪೆ, ಬಿ.ವಿ.ಹಳ್ಳಿ, ವಿರೂಪಾಕ್ಷಿಪುರ, ತಗಚಗೆರೆ, ವೈ ಟಿ ಹಳ್ಳಿ ಗ್ರಾಪಂಗಳ ಅವಧಿ ಮುಗಿಯಲಿದೆ.

ಕನಕಪುರ: ಆ.7ಕ್ಕೆ ತುಂಗಣಿ, ಚಾಕನಹಳ್ಳಿ, ಹೊಸದುರ್ಗ, ದೊಡ್ಡ ಆಲಹಳ್ಳಿ, ಹೂಕುಂದ, ಹುಣಸನಹಳ್ಳಿ, ಆ.8ಕ್ಕೆ ಸೋಮೇದ್ಯಾಪನಹಳ್ಳಿ, ಕಲ್ಲಹಳ್ಳಿ, ಅಚ್ಚಲು, ಟಿ.ಬೇಕುಪ್ಪೆ, ಚೂಡಹಳ್ಳಿ, ಮರಳೇಬೇಕುಪ್ಪೆ, ಆ.9ಕ್ಕೆ ಚಿಕ್ಕಮುದವಾಡಿ, ಅಳ್ಳಿಮಾರನಹಳ್ಳಿ,  ಬೂದಿಕುಪ್ಪೆ, ನಾರಾಯಣಪುರ, ಹೊನ್ನಿಗನಹಳ್ಳಿ, ಸಾತನೂರು, ಮುಳ್ಳಹಳ್ಳಿ, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಬನ್ನಿಮುಕ್ಕೋಡ್ಲು, ಶಿವನಹಳ್ಳಿ, ಕಬ್ಬಾಳು, ಕಾಡಹಳ್ಳಿ, ಐ ಗೊಲ್ಲಹಳ್ಳಿ, ಅರಕೆರೆ, ಆ.10ಕ್ಕೆ ಕೊಳಗೊಂಡನಹಳ್ಳಿ ಹಾಗೂ ಆ.8ಕ್ಕೆ ಅರೆಕಟ್ಟೆದೊಡ್ಡಿ ಗ್ರಾಪಂನ ಉಪಾಧ್ಯಕ್ಷ ಅವಧಿ ಹಾಗೂ ಸೆ.8ಕ್ಕೆ  ಅಧ್ಯಕ್ಷರ ಅವಧಿ ಪೂರ್ಣಗೊಳ್ಳಲಿದೆ.

ಇಷ್ಟೇ ಅಲ್ಲದೆ, ನ.2ಕ್ಕೆ ನಲ್ಲಹಳ್ಳಿ, ನ.28ಕ್ಕೆ ಉಯ್ಯಂಬಳ್ಳಿ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಪೂರ್ಣಗೊಳ್ಳಲಿದೆ.

ಹಾರೋಹಳ್ಳಿ: ಆ.7ಕ್ಕೆ ಕೊಟ್ಟಗಾಳು,  ಆ.8ಕ್ಕೆ ದೊಡ್ಡ ಮರಳವಾಡಿ, ಚೀಲೂರು, ಯಲಚವಾಡಿ, ತೋಕಸಂದ್ರ, ಆ.9ಕ್ಕೆ ಬಸವಾಸಿ, ದೊಡ್ಡಮುದವಾಡಿ ಗ್ರಾಪಂಗಳ ಮೊದಲ ಅವಧಿ ಪೂರ್ಣಗೊಳ್ಳಲಿದೆ.

ಮಾಗಡಿ: ಆ.7ಕ್ಕೆ ತಿಪ್ಪಸಂದ್ರ, ಆ.9ಕ್ಕೆ  ಅಜ್ಜನಹಳ್ಳಿ, ಚಿಕ್ಕಮುದಿಗೆರೆ, ಕುದೂರು, ಕಣ್ಣೂರು, ಬಿಸ್ಕೂರು, ಶ್ರೀಗಿರಿಪುರ, ಮೋಟಗೊಂಡನಹಳ್ಳಿ, ಆ.10ಕ್ಕೆ ಮಾಡಬಾಳ್, ಕಲ್ಯಾ, ಮತ್ತೀಕೆರೆ, ಬಾಚೇನಹಟ್ಟಿ, ನಾರಸಂದ್ರ, ಅದರಂಗಿ, ಆ.11ಕ್ಕೆ ಕಾಳಾರಿ ಕಾವಲ್, ಚಿಕ್ಕಹಳ್ಳಿ, ಸಂಕೀಘಟ್ಟ, ಹುಳ್ಳೇನಹಳ್ಳಿ, ಲಕ್ಕೇನಹಳ್ಳಿ, ಮಾದಿಗೊಂಡನಹಳ್ಳಿ, ಆ.12ಕ್ಕೆ ಸೀಗೇಕುಪ್ಪೆ, ಸಾತನೂರು, ಹಂಚಿಕುಪ್ಪೆ, ಅಗಲಕೋಟೆ, ಸೋಲೂರು,  ಹುಲಿಕಲ್, ಬಾಣವಾಡಿ, ಗುಡೇಮಾರನಹಳ್ಳಿ, ಆ. 15ಕ್ಕೆ ನೇತೇನಹಳ್ಳಿ, ಬಿಟ್ಟಸಂದ್ರ,  ಅಕ್ಟೋಬರ್ 04ಕ್ಕೆ ತಗ್ಗೀಕುಪ್ಪೆ ಮತ್ತು  ಬೆಳಗುಂಬ ಗ್ರಾಪಂಗಳ ಮೊದಲ ಅವಧಿ ಪೂರ್ಣಗೊಳ್ಳಲಿದೆ.