ಕಿರಣ್ ಮತ್ತು ವೆಂಕಟೇಶ್​ 
ಜಿಲ್ಲೆ

ಜಾತ್ರೆಯ ಊಟ ಮುಗಿಸಿ ಊರಿಗೆ ಹೊರಟ ಸ್ನೇಹಿತರಿಬ್ಬರು ಮಾರ್ಗ ಮಧ್ಯೆ ದುರಂತ ಸಾವು

ವಿಜಯನಗರ: ಬಸ್​ ಮತ್ತು ಬೈಕ್​ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸ್ನೇಹಿತರಿಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರಿನ ಬಳಿ ಬುಧವಾರ (ಮೇ.4) ನಡೆದಿದೆ.

ಬೈಕ್​ಗೆ ಬಸ್​ ಗುದ್ದಿದ ರಭಸಕ್ಕೆ ಕಿರಣ್(23) ಸ್ಥಳದಲ್ಲೇ ಮೃತಪಟ್ಟರೆ, ವೆಂಕಟೇಶ್​ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಸ್ನೇಹಿತರಿಬ್ಬರು ಕಾಕುಬಾಳು ಮೂಲದವರು.

ಗಾದಿಗನೂರಿನ ಜಾತ್ರೆಯ ಊಟ ಮುಗಿಸಿದ ಸ್ನೇಹಿತರಿಬ್ಬರು ಬೈಕ್​ ಏರಿ ಕಾಕುಬಾಳು ಕಡೆಗೆ ಹೊರಟಿದ್ದರು. ಇದೇ ಸಂದರ್ಭದಲ್ಲಿ ಹೊಸಪೇಟೆಯಿಂದ ಬಳ್ಳಾರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಬೈಕ್​ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊಸಪೇಟೆಯ ಗ್ರಾಮೀಣ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)