ವಿಜಯಪುರ: ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಅವರ ಧರ್ಮಪತ್ನಿಯ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ಇಲ್ಲಸಲ್ಲದ ಫೋಟೋ ಮತ್ತು ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ.
ಎಂ.ಬಿ. ಪಾಟೀಲ ಅವರ ಧರ್ಮಪತ್ನಿ ಆಶಾರಾಣಿ ಪಾಟೀಲರ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದ್ದು, ಲಾಗಿನ್ ಪಾಸವರ್ಡ್ ಬದಲಿಸಿದರೂ ಕೂಡ ಬೇಡವಾದ ಪೋಸ್ಟ್ಗಳನ್ನು ಮಾಡಲಾಗುತ್ತಿದೆ.
ಆಶಾ ಪಾಟೀಲರ ಆಪ್ತ ಸಹಾಯಕ ರವಿಶಂಕರ ಎನ್‌ಪಿಯ ಫೇಸ್‌ಬುಕ್ ಅಕೌಂಟ್‌ಗೆ ಆಶಾ ಪಾಟೀಲ ಪೇಜ್ ಆ್ಯಡ್ ಮಾಡಲಾಗಿತ್ತು. ಹ್ಯಾಕರ್ಗಳು ಬಾಕ್ಸಿಂಗ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಇದರಿಂದ ಬೇಸತ್ತ ಅವರು ವಿಜಯಪುರ ಸಿಇಓ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.