ತಿ.ನರಸೀಪುರ: ಸಮೀಪದ ತಾಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹರಿಹರಪುರದ ಆರ್.ಜ್ಞಾನೇಶ್ ಬುಧವಾರ ಪುನರಾಯ್ಕೆಯಾದರು.
ವೈಯಕ್ತಿಕ ಕಾರಣದಿಂದ ಜ್ಞಾನೇಶ್ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ನರಸೀಪುರ ನಂಜನಗೂಡು ಮುಖ್ಯರಸ್ತೆಯಲ್ಲಿರುವ ತಾಯೂರು ಗೇಟ್ ಬಳಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಸಭೆ ಕರೆಯಲಾಗಿತ್ತು. ಆಡಳಿತ ಮಂಡಳಿಯ ನಿರ್ದೇಶಕರು ಅವರ ಮನವೊಲಿಸಿ, ಜ್ಞಾನೇಶ್ ಅವರನ್ನೇ ಅವಿರೋಧವಾಗಿ ಮರು ಆಯ್ಕೆ ಮಾಡಿದರು.
ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಎನ್.ಸುಮಾ ಕಾರ್ಯ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ಹಾರೋಪುರ ಶಿವಣ್ಣ, ನಿರ್ದೇಶಕರಾದ ಎಂ.ಬಸವರಾಜು, ಜಿ.ಪಿ.ಮಹದೇವ ಪ್ರಸಾದ್, ಟಿ.ಪಿ.ಮಹೇಶ್, ಜಿ.ಎಂ. ಮಹದೇವಸ್ವಾಮಿ, ಟಿ.ಆರ್.ಲೋಕೇಶ್, ಕುಮಾರ, ಪುಟ್ಟಸ್ವಾಮಿ, ಮುದ್ದ ಮಾದೇಗೌಡ, ಸಾಕಮ್ಮ, ಚಾಮಮ್ಮ, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಶಿವಲಿಂಗೇಗೌಡ, ಸಿಇಒ ಪ್ರಮೋದ್ ಕುಮಾರ್, ಹಿರಿಯ ಸಹಾಯಕ ಆರ್.ಕಿಶೋರ್ ಕುಮಾರ್ ಹಾಗೂ ಇತರರು ಇದ್ದರು.