ಜಿಲ್ಲೆ

ಹೊಲದಲ್ಲಿ ಬಂಗಾರದ ನಾಣ್ಯಗಳ ನಿಧಿ ಸಿಕ್ಕಿದೆ: ಮಾತು ನಂಬಿ 2.50 ಲಕ್ಷ ರೂ. ಕಳೆದುಕೊಂಡ ಸೆಕ್ಯುರಿಟಿ

ದಾವಣಗೆರೆ: ನಕಲಿ ಬಂಗಾರ ನೀಡಿ 2.50 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಹರಪನಹಳ್ಳಿ ತಾಲೂಕು ಎರಡೆತ್ತಿನಹಳ್ಳಿಯ ದುರುಗಪ್ಪ ಬಂಧಿತ ಆರೋಪಿ. ಮಂಗಳೂರು ಮೂಲದ ಸೆಕ್ಯುರಿಟಿ ಕೆಲಸ ಮಾಡುವ ವಿಜಯಕುಮಾರ್​ ವಂಚನೆಗೆ ಒಳಗಾದವರು.

ಆರೋಪಿಯು ತನ್ನ ಹೆಸರು ವೆಂಕಟೇಶ್​ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಪಕ್ಕದ ಮನೆಯ ಅಜ್ಜನಿಗೆ ಹೊಲದಲ್ಲಿ ಬಂಗಾರದ ನಾಣ್ಯಗಳ ನಿಧಿ ಸಿಕ್ಕಿದೆ. ನಿಮಗೆ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ತಿಳಿಸಿದ್ದ.

ಮೊದಲು 2 ಅಸಲಿ ಚಿನ್ನದ ನಾಣ್ಯಗಳನ್ನು ನೀಡಿ ನಂಬಿಕೆ ಬರುವಂತೆ ಮಾಡಿದ್ದ. ನಂತರ ಅರ್ಧ ಕೆಜಿಯಷ್ಟು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 2.50 ಲಕ್ಷ ರೂ. ಲಪಟಾಯಿಸಿದ್ದ. ಈ ಬಗ್ಗೆ ಜನವರಿ ತಿಂಗಳಲ್ಲಿ ನಗರದ ಆರ್​.ಎಂ.ಸಿ. ಯಾರ್ಡ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.