ದಾವಣಗೆರೆ: ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ರವಿಕುಮಾರ್ ಎಸಿಬಿ ಬಲೆಗೆ ಬಿದ್ದ ದಾವಣಗೆರೆಯ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಕಚೇರಿ ಸಿಬ್ಬಂದಿ. ನಗರದ ಹದಡಿ ರಸ್ತೆಯಲ್ಲಿ ಶ್ರೀರಾಮ್ ಎಂಬುವರು ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಅದರ ಹಿಂಬಾಕಿ ಬಿಲ್ಗೆ ರೂ. 15ಸಾವಿರ ದಂಡ ವಿಧಿಸಲಾಗಿತ್ತು.
ದಂಡ ಶುಲ್ಕವನ್ನು ಸರಿಪಡಿಸುವುದಾಗಿ ಹೇಳಿ 5 ಸಾವಿರ ರೂ.ಗೆ ರವಿಕುಮಾರ್ ಬೇಡಿಕೆ ಇಟ್ಟಿದ್ದ. ಶ್ರೀರಾಮ್ ಅವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ ರವಿಕುಮಾರ್ನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)