ಜಿಲ್ಲೆ

ಕೋವಿಡ್​ಯೇತರ ಕಾಯಿಲೆಗಳಿಗೆ 2-3 ದಿನದಲ್ಲಿ ಔಷಧ ಪೂರೈಕೆ: ಆರೋಗ್ಯ ಸಚಿವ ಕೆ. ಸುಧಾಕರ್​

ಬೆಂಗಳೂರು: ಕೋವಿಡ್ ಹೊರತುಪಡಿಸಿ ಇತರೆ ಕಾಯಿಲೆಗೆ ಔಷಧ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.

ಕೋವಿಡ್​​ಯೇತರ ಕಾಯಿಲೆಗಳಿಗೆ ಮೆಡಿಸಿನ್ ಕೊರತೆ ನೀಗಿಸಲು ಡಿಹೆಚ್ಒಗಳ ಅಕೌಂಟ್​ಗೆ 38 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಎರಡ್ಮೂರು ದಿನಗಳಲ್ಲಿ ಔಷಧ ಲಭ್ಯವಾಗಲಿದೆ. ಆ ತರುವಾಯ ಯಾರೂ ಹೊರಗಿನಿಂದ ಔಷಧಕ್ಕೆ ಚೀಟಿ ಬರೆದುಕೊಡುವಂತಿಲ್ಲ ಎಂದು ಡಿಎಚ್ಒಗಳಿಗೆ ಫರ್ಮಾನ್ನು ಹೊರಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಬೊಟ್ಸ್ ವಾನಾ ಹೊಸ ರೂಪಾಂತರಿ ತಳಿ ಒಂದು ವಾರದಿಂದ ದಕ್ಷಿಣ ಆಫ್ರಿಕಾ, ಇಸ್ರೆಲ್, ಹಾಕಾಂಗ್​ನಲ್ಲಿ ಹೊಸ ತಳಿ ಕಾಣಿಸಿಕೊಂಡಿದೆ. 9 ತಿಂಗಳಿಂದ ಡೆಲ್ಟಾ ಬಿಟ್ಟು ರೂಪಂತಾರಗೊಂಡ ವೈರಸ್ ಬಂದಿರಲಿಲ್ಲ. ಒಮಿಕ್ರಾನ್ ಹೊಸ ತಳಿಗೆ WHO ನಾಮಕಾರಣ ಮಾಡಿದೆ. ಸಮುದಾಯಕ್ಕೆ ಬಂದ್ರೆ ವೇಗವಾಗಿ ಹರಡುತ್ತೆ ಎಂಬ ಮಾಹಿತಿ ಇದೆ. ವೇಗವಾಗಿ ಹರಡುವ ರೂಪಾಂತರ ತಳಿ ಇದಾಗಿದೆ. ನಾಲ್ಕು ರಾಷ್ಟ್ರಗಳಲ್ಲಿ ಈ ವೈರಸ್ ಹರಡಿದೆ. ಅಲ್ಲಿಂದ ಬರುವ ಪ್ರಯಾಣಿಕ ಮೇಲೆ ತೀವ್ರ ನಿಗಾ ನ ಹಿಸಲಾಗುವುದು ಎಂದರು‌.

ಹೊಸ ತಳಿಯ ರೋಗಲಕ್ಷಣಗಳು ಈ ಹಿಂದಿನ ಲಕ್ಷಣಗಳನ್ನೇ ಹೊಂದಿದೆ. (ಶೀತ, ಕೆಮ್ಮು, ಗಂಟಲು ನೋವು ಇತ್ಯಾದಿ) ವೈರಸ್ ಹರಡಿರುವ ದೇಶಗಳಿಂದ ಬರುವ ಪ್ರಯಾಣಿಕರ ಟೆಸ್ಟಿಂಗ್ ಮಾಡಲಾಗುವುದು. 250-300 ಜನರಿಗೆ ಕ್ವಾರಂಟೈನ್ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಧಾರವಾಡದ ವಿದ್ಯಾರ್ಥಿಗಳ ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಸಿದರು.

45 ಲಕ್ಷ ಜನ ಲಸಿಕೆ ತೆಗದುಕೊಂಡಿಲ್ಲ

ರಾಷ್ಟ್ರೀಯ ಸರಾಸರಿಯಲ್ಲಿ ಮೊದಲ ಡೋಸ್ 90 ರಷ್ಟು ಲಸಿಕೆಯಾಗಿದೆ. ನೆಗಟಿವ್ ಬಂದ ಮೇಲೂ ಒಂದು ವಾರ ಕ್ವಾರಂಟೈನ್ ನಲ್ಲಿರಬೇಕು. ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿ, ಹರಡುವ ತೀವ್ರತೆ ಬಗ್ಗೆ ಪರೀಕ್ಷೆ ಮಾಡಲಾಗುವುದು. ಹಾಗಾಗಿ ಸದ್ಯಕ್ಕೆ ಆತಂಕಪಡುವುದು ಬೇಡ ಎಂದು ಸುಧಾಕರ್ ಹೇಳಿದರು.