ಜಿಲ್ಲೆ

ಟೆಕ್ಕಿ ಪ್ರಾಣ ಕಸಿದ ವೀಕೆಂಡ್​ ಜಾಲಿ ರೈಡ್​: ಕುಣಿಗಲ್​ನಲ್ಲಿ ಬೈಕ್​ ಸಮೇತ ಬ್ರಿಡ್ಜ್​ ಮೇಲಿಂದ ಬಿದ್ದು ದುರ್ಮರಣ

ಕುಣಿಗಲ್: ಬೈಕ್​​ನಲ್ಲಿ ಜಾಲಿ ರೈಡ್​ಗೆ ಹೊರಟ್ಟಿದ್ದ ಸಾಫ್ಟ್​ವೇರ್ ಇಂಜಿನಿಯರ್ ಸೇತುವ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಗವಿಮಠ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಮೃತ ಟೆಕ್ಕಿಯನ್ನು ಬೆಂಗಳೂರಿನ ಬನಶಂಕರಿ ಎರಡನೇ ಹಂತದ ನಿವಾಸಿ ಸೂರಜ್( 27) ಎಂದು ಗುರುತಿಸಲಾಗಿದೆ. ಸೂರಜ್ ಬೆಂಗಳೂರಿನ ಇನ್ಫೋಸಿಸ್ ಕಂಪನಿಯಲ್ಲಿ ಇಂಜಿನಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಭಾನುವಾರ ರಜಾ ದಿನವಾದ ಕಾರಣ ಸ್ನೇಹಿತರೊಂದಿಗೆ ಡುಕಾಟಿ ಬೈಕ್​ನಲ್ಲಿ ಎಡಿಯೂರು ಬಳಿ ಇರುವ ಧ್ರುವತಾರೆ ಹೋಟೆಲ್​ಗೆ ಹೋಗುವಾಗ ತಾಲೂಕಿನ ಗವಿಮಠ ಬಳಿ ಈ ಅವಘಡ ಸಂಬವಿಸಿದೆ. ಟಿಟಿ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದು, ಸೇತುವೆಯಿಂದ ಬೈಕ್​ ಕೆಳಗೆ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಬೈಕ್ ಸವಾರ ಮೃತಪಟ್ಟಿದ್ದಾನೆ.