ಜಿಲ್ಲೆ

ಸರ್​, ಪತ್ನಿಯ ಬಯಕೆ ತೀರಿಸಬೇಕಿದೆ ಒಂದು ದಿನ ರಜೆ ಕೊಡಿ: ಇನ್ಸ್​ಪೆಕ್ಟರ್​ಗೆ ಪತ್ರ ಬರೆದ ಕಾನ್ಸ್​ಟೇಬಲ್​

ಬೆಂಗಳೂರು: ಮಡದಿಯ ಆಸೆ ತೀರಿಸಲು ರಜೆ ಕೇಳಿ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬರು ಇನ್ಸ್​ಪೆಕ್ಟರ್​ಗೆ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದಿದೆ.

ಪತ್ರ ಬರೆದ ಪೇದೆಯ ಹೆಸರು ಆನಂದ್​. ಇವರು ಸಿಸಿಬಿ ಆ್ಯಂಟಿ ನಾರ್ಕೋಟಿಕ್ ವಿಂಗ್​ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ವಾಯುವಿಹಾರ ಹಾಗೂ ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕೆಂದು ನನ್ನ ಮಡದಿ ಬಯಸಿದ್ದಾಳೆ. ಅದಕ್ಕಾಗಿ ಒಂದು ದಿನ ವಾರದ ರಜೆ ಕೊಡಿ ಎಂದು ಆನಂದ್​, ಇನ್ಸ್​ಪೆಕ್ಟರ್​ಗೆ ಪತ್ರ ಬರೆದಿದ್ದರು.

ಪತ್ರ ನೋಡಿದ ಇನ್ಸ್​ಪೆಕ್ಟರ್​ ಆನಂದ್​ ಅವರಿಗೆ ರಜೆಯನ್ನು ನೀಡಿದ್ದಾರೆ. ಇದೀಗ ಆನಂದ್​ ಅವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)