ಬೆಂಗಳೂರು: ಈಜಿಪುರ ಸಿಗ್ನಲ್ ಬಳಿಯ ಪಾದಚಾರಿ ಮಾರ್ಗ ಹಾಳಾಗಿದ್ದು ಇದು ಯಾವಾಗ ಸರಿ ಹೋಗುತ್ತದೆ ನೋಡುವ ಎಂದು ಶಾಸಕ ರಾಮಲಿಂಗ ರೆಡ್ಡಿ ಅವರಿಗೆ ಸ್ಥಳೀಯ ನಿವಾಸಿ ಕೌಂಟ್ಡೌನ್ ಶುರು ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಕೂನಲ್ಲಿ ಶಾಸಕರಿಗೊಂದು ಮನವಿ ಎಂಬ ಪೋಸ್ಟ್ನಲ್ಲಿ ಪಾದಚಾರಿ ಮಾರ್ಗದ ಸಮಸ್ಯೆಯ ಕುರಿತು ವಿವರಿಸಿದ್ದಾರೆ. ಇಲ್ಲಿದೆ ಅವರ ಮನವಿಯ ಸಂಪೂರ್ಣ ವಿವರ.
ಶಾಸಕರಿಗೊಂದು ಮನವಿ
ಈಜಿಪುರ ಸಿಗ್ನಲ್ ಬಳಿಯ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಹಾಳಾಗಿದ್ದು ಇದನ್ನು ತತ್ತಕ್ಷಣ ದುರಸ್ತಿ ಮಾಡಬೇಕಾಗಿ ವಿನಂತಿ.
ಪಾದಚಾರಿಗಳ ಸುರಕ್ಷತೆಯ ದ್ರಷ್ಟಿಯಿಂದ ಶಾಸಕರಾದ ರಾಮಲಿಂಗ ರೆಡ್ಡಿ ಅವರು ಗಮನ ಹರಿಸಬೇಕು. ಈ ರೀತಿ ಕ್ಷೇತ್ರದಾದ್ಯಂತ ಪಾದಚಾರಿ ಮಾರ್ಗಗಳು ದುಸ್ಥಿತಿಯಲಿದ್ದು, ಶಾಸಕರು ಬಿಬಿಎಂಪಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆ ನಡೆಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿ ವಿನಂತಿ.
ಬಿಟಿಎಂ ಕ್ಷೇತ್ರದ ನಿವಾಸಿಗಳೇ ದಿನ ಲೆಕ್ಕ ಹಾಕಿ, ಎಷ್ಟು ದಿನದಲ್ಲಿ ಈಜಿಪುರದ ಈ ಪಾದಚಾರಿ ಮಾರ್ಗ ರಿಪೇರ್ ಆಗುತ್ತದೆ ನೋಡೋಣ. ಎಂಎಲ್ಎ ರಾಮಲಿಂಗ ರೆಡ್ಡಿ ಸಾಹೇಬರೇ ನಿಮ್ಮ ಟೈಮ್ ಸ್ಟಾರ್ಟ್ಸ್ ನೌ.