ಜಿಲ್ಲೆ

ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿ: ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಶಾಸಕ ಶರಣು ಸಲಗರ

ಬಸವಕಲ್ಯಾಣ: ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಸಸ್ತಾಪುರ ಬಂಗ್ಲಾ ಬಳಿ ಗುರುವಾರ ರಾತ್ರಿ ಎರಡು ಬೈಕ್ ಮಧ್ಯೆ ಡಿಕ್ಕಿಯಾಗಿದ್ದು, ನಾಲ್ಕು ಜನರಿಗೆ ಗಾಯಗಳಾಗಿವೆ.

ಕಾಂಬಳೆವಾಡಿಯಲ್ಲಿ ಕಾರ್ಯಕ್ರಮ ಮುಗಿಸಿ ಇದೇ ಮಾರ್ಗದಿಂದ ಬರುತ್ತಿದ್ದ ಶಾಸಕ ಶರಣು ಸಲಗರ ತಮ್ಮ ವಾಹನ ನಿಲ್ಲಿಸಿ, ಗಾಯಾಳುಗಳ‌ನ್ನು ಬಸವಕಲ್ಯಾಣ ಸರ್ಕಾರಿ ಅಸ್ಪತ್ರೆಗೆ ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ದಾಖಲಿಸುವ ಮೂಲಕ ಮಾನವೀಯತೆ ಮೆರೆದರು.

ಗಾಯಾಳುಗಳ ಪೈಕಿ ಮೂವರು ಸಸ್ತಾಪುರ ಹಾಗೂ ಇನ್ನೊಬ್ಬರು ಅತಲಾಪೂರ ಗ್ರಾಮದವರಾಗಿದ್ದಾರೆ. ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಶಾಸಕರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.