ಜಿಲ್ಲೆ

ಅಯ್ಯೋ ದುರ್ವಿಧಿಯೇ! ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ಜೋಡಿ ಮಸಣದ ಪಾಲು

ಬಳ್ಳಾರಿ: ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ಜೋಡಿ ಮಸಣ ಸೇರಿರುವ ದುರಂತ ಘಟನೆ ನಡೆದಿದ್ದು, ಸಂಭ್ರಮ ಮನೆ ಮಾಡಿದ್ದ ಮನೆಯಲ್ಲೂ ದುಃಖದ ಕಾರ್ಮೋಡ ಆವರಿಸಿದೆ.

ಸಿರಗುಪ್ಪ ತಾಲೂಕಿನ ರಾರಾವಿ ಬಳಿ ನವಜೋಡಿಗಳು ಅಪಘಾತಕ್ಕೆ ಬಲಿಯಾಗಿದ್ದಾರೆ. ವಿನಯ (28) ಹಾಗೂ ಸೌಜನ್ಯ( ‌24) ಮೃತ ದುರ್ದೈವಿಗಳು. ಕುರುಗೋಡು ನಿವಾಸಿ ವಿನಯ್ ಹಾಗೂ ವೀರಾಪುರದ ಸೌಜನ್ಯಗೆ ಕಳೆದ ವಾರ ನಿಶ್ಚಿತಾರ್ಥವಾಗಿತ್ತು.

ನಿನ್ನೆ ನವಜೋಡಿ ಮಂತ್ರಾಲಯಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ರಾತ್ರಿ ಅಪಘಾತವಾಗಿದೆ. ರಾರಾವಿ ಬಳಿ ಡಿವೈಡರ್​ಗೆ ಕಾರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಇಡೀ ಗ್ರಾಮವೇ ಕಣ್ಣಿರಿಟ್ಟಿದೆ. (ದಿಗ್ವಿಜಯ ನ್ಯೂಸ್​)