ಮುಧೋಳದ ಶ್ರೀ ರಾಮ ಮಂದಿರದಲ್ಲಿ ಶಾಸಕ ಆರ್.ಬಿ. ತಿಮ್ಮಾಪೂರ ಉಡುಪಿಯ ಪೇಜಾವರ ಮಠದ ಪ್ರಸನ್ನ ತೀರ್ಥ ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು. ರಾಘವೇಂದ್ರ ಕುಲಕರ್ಣಿ, ಡಾ.ಸಂಜಯ ಘಾರಗೆ, ಉದಯಸಿಂಹ ಡತರೆ, ಶಿವಾನಂದ ಉದಪುಡಿ, ವಿನಯ ತಿಮ್ಮಾಪುರ ಮತ್ತಿತರರಿದ್ದಾರೆ. 
ಜಿಲ್ಲೆ

ಪ್ರಸನ್ನ ತೀರ್ಥ ಶ್ರೀಗಳ ಆಶೀರ್ವಾದ ಪಡೆದ ಆರ್.ಬಿ. ತಿಮ್ಮಾಪೂರ

ಮುಧೋಳ: ಶಾಸಕ ಆರ್.ಬಿ. ತಿಮ್ಮಾಪೂರ ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಭಾನುವಾರ ಉಡುಪಿಯ ಪೇಜಾವರ ಮಠದ ಪ್ರಸನ್ನ ತೀರ್ಥ ಶ್ರೀಗಳ ದರ್ಶನ ಪಡೆದು ಸನ್ಮಾನ ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡರು.

ಸಮಾರಂಭ ಆಯೋಜಿಸಿದ್ದ ಬ್ರಾಹ್ಮಣ ಸಮಾಜದ ಮುಖಂಡ ಕಿಶೋರ್ ಮಸೂರಕರ ಮಾತನಾಡಿ, ಸಚಿವರು ಬ್ರಾಹ್ಮಣ ಸಮಾಜದ ಮೇಲೆ ಅತ್ಯಂತ ಪ್ರೀತಿಯುಳ್ಳವರಾಗಿದ್ದಾರೆ ಎಂದು ಶ್ರೀಗಳಿಗೆ ತಿಳಿಸಿದರು.

ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಡಾ.ಸಂಜಯ ಘಾರಗೆ, ಕಾಂಗ್ರೆಸ್ ಮುಖಂಡ ಉದಯಸಿಂಹ ಡತರೆ, ಶಿವಾನಂದ ಉದಪುಡಿ, ಯುವ ಧುರೀಣ ವಿನಯ ತಿಮ್ಮಾಪುರ, ಗೋದಾವರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ , ಸಧರ್ಮ ಮಂಡಳ ಅಧ್ಯಕ್ಷ ಪಿ.ಎಂ.ದೇಶಪಾಂಡೆ, ಕಾರ್ಯದರ್ಶಿ ಆನಂದ್ ಝೇರೆ, ಸಂಜೀವ ಮೊಕಾಶಿ, ಕೌಶಿಕ್ ಕುಲಕರ್ಣಿ, ಸಂಜೀವ ದಿಡ್ಡಿ, ಅಕ್ಷಯ ಕುಲಕರ್ಣಿ ಮತ್ತಿತರರಿದ್ದರು.