ಜಿಲ್ಲೆ

ಸವಿನಿದ್ದೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟ ಎಸಿಬಿ: ಏಕಕಾಲದಲ್ಲಿ 9 ಕಡೆ ದಾಳಿ

ಬೆಂಗಳೂರು  ಸವಿನಿದ್ದೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್​ ನೀಡಿದೆ. ಏಕಕಾಲಕಕ್ಕೆ ಬೆಂಗಳೂರಿನ 9 ಕಡೆಗಳಲ್ಲಿ 100 ಅಧಿಕಾರಿಗಳಿಂದ ದಾಳಿ ನಡೆದಿದೆ.  ಬೆಂಗಳೂರು ನಗರದ 9 ವಿವಿಧ ಸ್ಥಳಗಳಲ್ಲಿ 9 ಮಧ್ಯವರ್ತಿಗಳು/ಏಜೆಂಟರು/ ಭ್ರಷ್ಟ/ಅಕ್ರಮ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರುವ/ತಮ್ಮ ವೈಯಕ್ತಿಕ ಪ್ರಭಾವದ ಮೂಲಕ ಬೆಂಗಳೂರಿನ ಚಟುವಟಿಕೆಗಳಲ್ಲಿ ಅವ್ಯವಹಾರಗಳು ಮತ್ತು ಇತರ ಅಕ್ರಮಗಳಲ್ಲಿ ತೊಡಗಿರುವ ಶಂಕಿತರಿಗೆ ಸಂಬಂಧಿಸಿದಂತೆ 9 ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದೆ.

ಅಭಿವೃದ್ಧಿ ಪ್ರಾಧಿಕಾರ. ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸುತ್ತಿದ್ದಾರೆ. ಪ್ರಧಾನ ಕಚೇರಿ .

ದಾಳಿಯ ವಿವರ ಇಂತಿದೆ.

ಬೆಂಗಳೂರಿನಲ್ಲಿ ಯಾವ ಅಧಿಕಾರಿ ಮೇಲೆ, ಎಲ್ಲೆಲ್ಲಿ ಎಸಿಬಿ ದಾಳಿ ನಡೆದಿದೆ ಎಂಬುದ ಡಿಟೇಲ್ಸ್​ ಈ ಕೆಳಗಿದೆ

1) ರಾಘು ಬಿ.ಎನ್, ಚಾಮರಾಜಪೇಟೆ

2) ಮೋಹನ್, ಮನೋರಾಯನಪಾಳ್ಯ, ಆರ್ ಟಿ ನಗರ

3) ಮನೋಜ್, ದೊಮ್ಮಲೂರು

4) ಮುನಿರತ್ನ, ಮಲ್ಲತಹಳ್ಳಿ

5) ತೇಜು ಅಲಿಯಾಸ್​ ತೇಜಸ್ವಿ, ಆರ್ ಆರ್ ನಗರ

6) ಅಶ್ವಥ್, ಮುದ್ದಿನಪಾಳ್ಯ, ಮಲ್ಲತಹಳ್ಳಿ

7) ರಾಮ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್

8) ಲಕ್ಷ್ಮಣ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್

9) ಚಿಕ್ಕಹನುಮಯ್ಯ, ಮುದ್ದಿನಪಾಳ್ಯ