ಮುನವಳ್ಳಿ: ಬಸವಾದಿ ಶರಣರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತಗೊಳಿಸದೆ, ಅವರ ತತ್ತ$್ವ ಅನುಸರಿಸುವ ಕಾರ್ಯ ಆಗಬೇಕಿದೆ ಎಂದು ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಲಿಂಗೇಶ್ವರಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ವಚನಗಳು ಹಾಗೂ ಶರಣ ಪರಂಪರೆಯ ಮಾರ್ಗದಲ್ಲಿ ನಾವೆಲ್ಲ ಮುನ್ನಡೆದು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಪ್ರವಚನಕಾರ ಧಾರವಾಡದ ಶಿವಬಸವದೇವರು ಮಾತನಾಡಿ, ಪ್ರವಚನಗಳು ಜನರ ಕತ್ತಲೆ ಕಳೆದು ಜ್ಞಾನವೆಂಬ ಬೆಳಕು ನೀಡಿ ಅಂತರಂಗ ಪರಿಶುದ್ಧವಾಗಿಸುತ್ತವೆ. ಆದ್ದರಿಂದ ಶರಣರ ಜೀವನ ದರ್ಶನ ಆಲಿಸಬೇಕು ಎಂದರು.
ಬಸವಸೇನೆ ಅಧ್ಯ ಉಮೇಶ ಬಾಳಿ ಪ್ರಾಸ್ತಾವಿಕ ಮಾತನಾಡಿ, ಪ್ರತಿವರ್ಷ ಬಸವ ಜಯಂತಿ ನಿಮಿತ್ತ ಪ್ರವಚನ ಹಮ್ಮಿಕೊಂಡು ಜನರನ್ನು ಶರಣರ ತತ್ತ$್ವದಡಿ ಮುನ್ನಡೆಯಲು ಪ್ರೇರಣೆ ನೀಡುವುದೇ ಸದುದ್ದೇಶ ಎಂದರು. ನಿವತ್ತ ಮುಖ್ಯಶಿಕ್ಷಕ ಬಿ.ಬಿ. ನಾವಲಗಟ್ಟಿ ಮಾತನಾಡಿ, ಶರಣರು ಸಮಾಜೋದ್ಧಾರಕರು. ಅವರ ಆದರ್ಶಗಳನ್ನು ಪಾಲಿಸೋಣ ಎಂದರು. ಬಸವಸೇನೆಯ ಚಂದ್ರಗೌಡ ಮಲಗೌಡ್ರ, ಡಾ.ಎಂ.ಬಿ. ಅಷ್ಟಗಿಮಠ, ಶಿವಾನಂದ ಮೇಟಿ, ಅಶೋಕ ಹಾದಿಮನಿ, ಅಣ್ಣಯ್ಯ ಟವಾಳಿಮಠ, ರಾಜಣ್ಣ ಬಾಳಿ, ಆನಂದ ಜೋಶಿ, ಶಿವಪುತ್ರಪ್ಪ ಕೆಳಗಡೆ, ಅಶೋಕ ಪಟ್ಟಣಶೆಟ್ಟಿ, ಶಂಕರ ಬಂಡಿ, ಬಿ.ಬಿ. ಹುಲಿಗೊಪ್ಪ, ಬಾಳು ಹೊಸಮನಿ, ವೆ.ಎ್. ಶ್ಯಾನಭೋಗ, ಮಂಜು ಭಂಡಾರಿ, ವೆ.ಬಿ. ಕಡಕೋಳ, ಬಸವರಾಜ ಮಡಿವಾಳರ, ನೀಲಾಂಬಿಕಾ ಬಳಗದ ಸವಿತಾ ಬಾಳಿ, ಅನ್ನಪೂರ್ಣ ಲಂಬೂನವರ ಇತರರು ಇದ್ದರು.