ಕವಲಗಿ ಗ್ರಾಮದ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಕಾರ್ಯಕ್ರಮದಲ್ಲಿ ವೈದ್ಯೆ ಡಾ. ಸುಮಂಗಲಾ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶರ್ಮಿಳಾ ಹೇಮಂತ್​, ಶಿವಾನಂದ ಬಬಲೇಶ್ವರ ಮತ್ತಿತರರಿದ್ದಾರೆ. 
ಜಿಲ್ಲೆ

ದುಶ್ಚಟ ಬಿಟ್ಟು ರೋಗಮುಕ್ತರಾಗಿ ಜೀವಿಸಿ

ಗಿರೀಶ ಸಗರ

ವಿಜಯಪುರ : ತಾಲೂಕಿನ ಕವಲಗಿ ಗ್ರಾಮದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು.

ಡಾ. ಸುಮಂಗಲಾ ಮಹೇಶ ಪಾಟೀಲ ಮಾತನಾಡಿ, ಹಲವು ಕಾಯಿಲೆಗಳ ಕುರಿತು ತಿಳಿಸಿದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ರೋಗಮುಕ್ತರಾಗಿ ಜೀವಿಸುವಂತೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾಯೆರ್ ಶರ್ಮಿಳಾ ಹೇಮಂತ್​ ರಾಷ್ಟ್ರೀಯ ವೈದ್ಯರ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿನಿ ಪ್ರಿಯಾಂಕಾ ಮಠ ಮತ್ತು ಸೃಷ್ಟಿ ಕೆರುಟಗಿ ವೈದ್ಯರ ದಿನಾಚರಣೆ ಮಹತ್ವ ಸಾರಿದರು. ಸೃಷ್ಟಿ ಅನಾಮಿ ಮುಂದೆ ನಾನು ಕೂಡ ವೈದ್ಯ ಆಗಬೇಕೆಂಬ ವಿಷಯದ ಬಗ್ಗೆ ಮಾತನಾಡಿದಳು. ಶಿವಾನಂದ ಬಬಲೇಶ್ವರ ಸ್ವಾಗತಿಸಿದರು. ತನುಶ್ರೀ ಡಂಬಳ ನಿರೂಪಿಸಿದರು. ಶ್ರೀರಾ ಅವಟಿ ವಂದಿಸಿದರು.