ಜಿಲ್ಲೆ

ಕರೊನಾ ವಾರಿಯರ್ಸ್‌ಗೆ ಶೀಘ್ರ ಕಿಟ್ ವಿತರಣೆ

ಬೇಲೂರು: ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ಮೈಕ್ರೋ ಫೈನಾನ್ಸ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು.

ಸಂಸ್ಥೆಯ ವಲಯ ವ್ಯವಸ್ಥಾಪಕ ನಾಗಪ್ಪ ಮಾತನಾಡಿ, ಕರೊನಾ ವಾರಿಯರ್ಸ್‌ಗೆ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುವುದು ಎಂದರು.

ಪಿಎಸ್‌ಐ ಅಜಯ್‌ಕುಮಾರ್ ಮಾತನಾಡಿದರು. ಪ್ರಭಾರ ಪಿಎಸ್‌ಐ ಸವಿತಾ ಪಾಟೀಲ್, ಎಎಸ್‌ಐ ನಾಗರಾಜ್, ಸಿಬ್ಬಂದಿ ಶಂಕರಯ್ಯ, ರಂಗಸ್ವಾಮಿ, ಪುಟ್ಟಸ್ವಾಮಿ, ದೇವಯ್ಯ, ಮೈಕ್ರೋ ಫೈನಾನ್ಸ್‌ನ ಸುನೀಲ್, ಜವರಪ್ಪ, ರುದ್ರೇಶ್, ಚಂದನ್ ಇತರರಿದ್ದರು.