ಜಿಲ್ಲೆ

ತ್ರೈಮಾಸಿಕ ಕಾರ್ಯನಿರ್ವಹಣೆ: ನ.8ರಂದು ಮಂಡ್ಯದಲ್ಲಿ ವಿವಿಧೆಡೆ ಕರೆಂಟ್ ಇರಲ್ಲ

ಕೆ.ಎನ್.ರಾಘವೇಂದ್ರ

ಮಂಡ್ಯ: ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ನ.8ರಂದು ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿ.ಸಿ ಫಾರ್ಮ್ ವಿದ್ಯುತ್ ವಿತರಣಾ ಕೇಂದ್ರದ ವಿ.ಸಿ ಫಾರ್ಮ್, ಶಿವಳ್ಳಿ, ದುದ್ದ, ಬಿ.ಹಟ್ನ, ಬೇವುಕಲ್ಲು, ಹುಲಿಕೆರೆ, ಚಂದಗಾಲು, ಹುಲ್ಲೇನಹಳ್ಳಿ, ಹೊಳಲು ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಪ್ರಕಟಣೆ ತಿಳಿಸಿದೆ.