ಜಿಲ್ಲೆ

ರೈತರಲ್ಲಿ ಆತಂಕ ಸೃಷ್ಟಿಸಿದ ಕಲ್ಲುಗಣಿ ಸ್ಫೋಟ

ತುಮಕೂರು ಡೆಸ್ಕ್

ತಿಪಟೂರು: ಕಲ್ಲುಗಣಿ ಸ್ಫೋಟದ ರಭಸಕ್ಕೆ ಮನೆಗಳು ಬಿರುಕು ಬಿಟ್ಟಿದ್ದು, ತೋಟದ ಮನೆ ರೈತರು ಮನೆ, ಮಠ, ತೊರೆಯುವ ಸ್ಥಿತಿ ನಿರ್ವಾಣವಾಗಿದ್ದರೂ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ತಹಸೀಲ್ದಾರ್ ಜಿ.ಆರ್.ಮೋಹನ್‌ಕುವಾರ್ ಮೂಲಕ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಗಂಗರಾಜು, ತಾಲೂಕಿನ ಜಲ್ಲಿ ಕ್ರಷರ್‌ಗಳಲ್ಲಿ ಕಲ್ಲು ಬಂಡೆ ಸ್ಫೋಟಕ್ಕೆ ಭಾರಿ ಪ್ರವಾಣದ ಯಂತ್ರೋಪಕರಣ ಬಳಸಲಾಗುತ್ತಿದ್ದು, ಸ್ಫೋಟದ ರಭಸಕ್ಕೆ ಸುತ್ತಮುತ್ತಲ ಗ್ರಾಮಗಳ ರೈತರ ಮನೆಗಳು ಬಿರುಕು ಬಿಟ್ಟಿದ್ದು, ಮನೆಗಳು ಕುಸಿಯುವ ಭೀತಿಯಿಂದ ಜನರು ಮನೆಗಳನ್ನು ತೊರೆಯುತ್ತಿದ್ದಾರೆ. ರೈತರು ಜಮೀನುಗಳಲ್ಲಿ ಕೊರೆಸಿದ ಕೊಳವೆಬಾವಿಗಳ ನೀರು ಬತ್ತಿ ಹೋಗುತ್ತಿದೆ. ಸ್ಫೋಟದ ರಭಸಕ್ಕೆ ಮೂರ‌್ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸುತ್ತಿದೆ. ಕಲ್ಲು ಬಂಡೆ ಸ್ಫೋಟಿಸಲು ಸುವಾರು 80ರಿಂದ 100 ಅಡಿ ಆಳಕ್ಕೆ ಕಂದಕ ಉಂಟುವಾಡಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಬತ್ತಿಹೋಗುವ ಭೀತಿ ಕಾಡುತ್ತಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ್ ವಾತನಾಡಿ, ಕ್ರಷರ್ ಧೂಳಿನಿಂದ ರೈತರು ಬೆಳೆದ ತೆಂಗು ಹಾಗೂ ರೇಷ್ಮೆ ಸೇರಿದಂತೆ ಇನ್ನಿತರ ಬೆಳೆ ಹಾಳಾಗುತ್ತಿದೆ. ಗ್ರಾಮಸ್ಥರ ರಕ್ಷಣೆಗೆ ಮುಂದಾಗಬೇಕಿರುವ ಜಿಲ್ಲಾಡಳಿತ ರಾಜಕೀಯ ಪ್ರಭಾವಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕೂಡಲೇ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಮನವಿ ಸಲ್ಲಿಸಿದರು.

ತಾಲೂಕು ವಾಜಿ ಅಧ್ಯಕ್ಷ ಬಳ್ಳೇಕಟ್ಟೆ ಸುರೇಶ್, ನಗರ ಅಧ್ಯಕ್ಷ ಗುಲಾಬಿ ಸುರೇಶ್, ಯುವ ಮುಖಂಡ ವಿಶ್ವದೀಪ್ ಇತರರು ಇದ್ದರು.