ಜಿಲ್ಲೆ

ಕ್ವಾರಂಟೈನ್ ಮಾಡದಂತೆ ಪ್ರತಿಭಟನೆ

ಬೆಳಗಾವಿ: ಮಾಳಮಾರುತಿ ಪ್ರದೇಶ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 15ಕ್ಕೂ ಹೆಚ್ಚು ಕರೊನಾ ಶಂಕಿತರಿಗೆ ಕ್ವಾರಂಟೈನ್ ಮಾಡುತ್ತಿದ್ದಾರೆ ಎಂಬ ವದಂತಿಯಿಂದಾಗಿ ನಿವಾಸಿಗಳು ಶುಕ್ರವಾರ ವಂಟಮೂರಿ ಕಾಲನಿಯಲ್ಲಿ ಪ್ರತಿಭಟಿಸಿದರು.

ಮೂರು ವಾರ್ಡ್‌ಗಳನ್ನು ಹೊಂದಿರುವ ಮಾಳಮಾರುತಿ ಪ್ರದೇಶ ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ಕರೊನಾ ಶಂಕಿತರನ್ನು ಕ್ವಾರಂಟೈನ್ ಮಾಡುವುದು ಬೇಡ. ಬೇಕಾದರೆ ಸುವರ್ಣ ವಿಧಾನಸೌಧ ಖಾಲಿ ಇದೆ. ಅಲ್ಲಿ ಕ್ವಾರಂಟೈನ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಪಾಲಿಕೆ ಉಪ ಆಯಕ್ತೆ ಲಕ್ಷ್ಮೀ ನಿಪ್ಪಾಣಿಕರ ಇದಕ್ಕೆ ಪ್ರತಿಕ್ರಿಯಿಸಿ, ಕರೊನಾ ವೈರಸ್ ಶಂಕಿತರನ್ನು ಕ್ವಾರಂಟೈನ್‌ಗೆ ತಂದಿಲ್ಲ. ಗರ್ಭಿಣಿಯರು ಮತ್ತು ಮಕ್ಕಳನ್ನು ಚಿಕಿತ್ಸೆಗೆ ಕರೆ ತಂದಿದ್ದೇವೆ.

ಕರೊನಾ ಶಂಕಿತರು ಮತ್ತು ಸೋಂಕಿತರ ಮಧ್ಯೆ ಗರ್ಭಿಣಿಯರಿಗೆ, ಮಕ್ಕಳಿಗೆ ಚಿಕಿತ್ಸೆ ನೀಡಬಾರದೆಂಬ ಉದ್ದೇಶದಿಂದ ಇಲ್ಲಿ ಚಿಕಿತ್ಸೆಗೆ ತಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ನಿವಾಸಿಗಳಾದ ಆರ್.ಪಿ. ಪಾಟೀಲ, ದಿನೇಶ ನಾಶಿಪುಡಿ ಇತರರಿದ್ದರು.