ತಾವರಗೇರಾದಲ್ಲಿ ನಗರೋತ್ಥಾನ ಯೋಜನೆಯಡಿ ನಡೆದಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಪರಿಶೀಲಿಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ, ಕಾರ್ಯ ಪಾಲಕ ಅಭಿಯಂತ ಶರಣಪ್ಪ, ಸಹಾಯಕ ಅಭಿಯಂತರ ಶಿವಕುಮಾರ, ಪಪಂ ಮುಖ್ಯಾಧಿಕಾರಿ ಮಹೇಶ ಅಂಗಡಿ ಮತ್ತು ಪಪಂ ನೌಕರ ಶರಣಬಸವ ಸೈಂದರ ಇದ್ದರು. 
ಜಿಲ್ಲೆ

ಗುಣಮಟ್ಟದ ಕಾಮಗಾರಿ ಕೈಗೊಳ್ಳಿ

ರುದ್ರಪ್ಪ ವಾಲಿ

ತಾವರಗೇರಾ: ಪಟ್ಟಣದಲ್ಲಿ ನಡೆದಿರುವ ನಗರೋತ್ಥಾನ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಪಂಚಾಯಿತಿ ಸಿಬ್ಬಂದಿ ಹಾಗೂ ಮುಖ್ಯಾಧಿಕಾರಿಗೆ ಸೂಚಿಸಿದರು.

ತಾವರಗೇರಾದ ರಾಯನಕೆರೆಯಿಂದ ಕಡಿಕೋಡದ ಮೂಲಕ ನೀರು ಹರಿದು ಮುಂದೆ ಚಟ್ನಿಕೆರೆ ಸೇರುವ ಕಚ್ಚಾ ಕಾಲುವೆಗೆ ನಗರೋತ್ಥಾನ ಯೋಜನೆಯಡಿ ಕಾಲುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.