ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಶನಿವಾರ ಹಮ್ಮಿಕೋಮಡಿದ್ದ ಅಂಚೆ ಜನ ಸಂಪರ್ಕ ಅಭಿಯಾನವನ್ನು ಅಂಚೆ ಇಲಾಖೆ ಅಧೀಕ್ಷಕ ವಿ.ಎಲ್. ಚಿತ್ಕೋಟಿ ಉದ್ಘಾಟಿಸಿದರು. ಪ್ರಮುಖರಾದ ಎಸ್. ಗುರುಮೂರ್ತಿ ಶೆಟ್ಟಿ , ತಿಂದಪ್ಪ ಬಣಕಾರ, ಹಾಲಪ್ಪ ಇದ್ದರು. 
ಜಿಲ್ಲೆ

ಗುಣಮಟ್ಟ ಸೇವೆ ನೀಡುವುದು ನಮ್ಮ ಕರ್ತವ್ಯ

Gangavati - Desk - Veeresh S Ullagaddi

ಕೊಟ್ಟೂರು: ಸಾರ್ವಜನಿಕರಿಗೆ ಅಂಚೆ ಇಲಾಖೆ ನೂರಕ್ಕೂ ಹೆಚ್ಚು ಸೇವೆಗಳನ್ನು ಏಕಕಾಲಕ್ಕೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಳ್ಳಾರಿ ಅಂಚೆ ಅಧೀಕ್ಷಕ ವಿ. ಎಲ್. ಚಿತ್ಕೋಟಿ ಹೇಳಿದರು.


ತಾಲೂಕಿನ ಹರಾಳು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಅಂಚೆ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.


ಹಳ್ಳಿಯಿಂದ ವಿದೇಶಗಳವರೆಗೆ ಹಬ್ಬಿರುವ ಭಾರತೀಯ ಅಂಚೆ ಇಲಾಖೆ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. 1,56,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಕೊಟ್ಟೂರಿನಲ್ಲಿ ಹೊಸ ಅಂಚೆ ಕಟ್ಟಡ 1.69 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದರು.


ಉಪ ಅಂಚೆ ನಿರೀಕ್ಷಕ ರಾಜಪ್ಪ ಬಾರಿಕರ್ ಮಾತನಾಡಿ, ಕೂಡ್ಲಿಗಿಯ ಅಂಚೆ ಇಲಾಖೆಯು ಇದುವರೆಗೂ ಆರಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮ ಮಾಡಿದೆ. ಇಡೀ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದರು.


ಮುಖ್ಯ ಶಿಕ್ಷಕ ರೇಣುಕಾಚಾರಿ ಮಾತನಾಡಿದರು. ಅಂಚೆಪಾಲಕರಾದ ರಾಜಶೇಖರ ಶೆಟ್ಟಿ, ನಾಗರಾಜ, ಪೃಥ್ವಿ, ಅಂಚೆ ಸಹಾಯಕರಾದ ಕೆಂಗನವರ ಸತೀಶ್, ವಿ ಬನ್ನೇಶ್, ಪ್ರಮುಖರಾದ ವಿ, ಮಂಜುನಾಥ, ದೀಪಿಕಾ ಯಶೋಧ ಇದ್ದರು.