ಸಿರವಾರದಲ್ಲಿ ರಸ್ತೆ ಕಾಮಗಾರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಮಂಗಳವಾರ ಚಾಲನೆ ನೀಡಿದರು. ಸಿರವಾರ ಪಪಂ ಅಧ್ಯಕ್ಷ ವೈ.ಭೂಪನಗೌಡ, ಪ್ರಮುಖರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶಿವಶರಣ ಸಾಹುಕಾರ್ ಅರಕೇರಿ, ದಾನನಗೌಡ, ನಿಂಬಯ್ಯ ಸ್ವಾಮಿ, ರಮೇಶ ದರ್ಶನಕರ್ ಇತರರಿದ್ದರು. 
ಜಿಲ್ಲೆ

ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ

ನರೇಶ್ ಕುಮಾರ್

ಸಿರವಾರ: ಗುಣಮಟ್ಟದ ರಸ್ತೆಗಳು ನಿರ್ಮಾಣ ಮಾಡುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿವೆ. ಅಲ್ಲದೆ ಪಟ್ಟಣ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಬಸವ ವೃತ್ತದಿಂದ ದೇವದುರ್ಗ ರಸ್ತೆಯ ನಾಗಡದಿನ್ನಿ ಕ್ರಾಸ್‌ವರೆಗಿನ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಯೋಜನೆಯಡಿ 2.85 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚಿಸಿದ ಅವರು, ಮುಂದಿನ ದಿನಗಳಲ್ಲಿ ಪಟ್ಟಣದ ಮುಖ್ಯರಸ್ತೆ ಹಾಗೂ ಪ್ರಜಾಸೌಧ, ಕ್ರೀಡಾಂಗಣ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಶಾಸಕ ಜಿ.ಹಂಪಯ್ಯ ನಾಯಕ, ಸಿರವಾರ ಪಪಂ ಅಧ್ಯಕ್ಷ ವೈ.ಭೂಪನಗೌಡ, ಪ್ರಮುಖರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶಿವಶರಣ ಸಾಹುಕಾರ್ ಅರಕೇರಿ, ದಾನನಗೌಡ, ನಿಂಬಯ್ಯ ಸ್ವಾಮಿ, ರಮೇಶ ದರ್ಶನಕರ್, ಅಬ್ರಹಾಂ ಹೊನ್ನಟಗಿ, ಬಸವರಾಜ ಬೆಣ್ಣಿ, ಎಚ್. ಕೆ.ಅಮರೇಶ, ತಹಸೀಲ್ದಾರ್ ರವಿ ಎಸ್.ಅಂಗಡಿ, ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಕೆಕೆಆರ್‌ಡಿಬಿ ಇಇ ಜಗದೇವು ಮೋತಿ, ಎಇಇ ವೆಂಕಟೇಶ ಹುಲಿಗೇರಿ, ಗುತ್ತಿಗೆದಾರ ಗೋವಿಂದ, ಪಾಂಡು ಪವಾರ್ ಇತರರಿದ್ದರು.