ಕೊಳ್ಳೇಗಾಲ: ತಾಲೂಕಿನ ಸೂರಪುರ ಗ್ರಾಮದ ಕಬ್ಬಿನ ಜಮೀನಿನೊಂದರಲ್ಲಿ ಶನಿವಾರ ಹೆಬ್ಬಾವು ಪ್ರತ್ಯಕ್ಷವಾಗಿ ರೈತರಿಗೆ ಆತಂಕ ಹುಟ್ಟಿಸಿತು. ಗ್ರಾಮದ ಜಗದೀಶ್ ಅವರ ಜಮೀನಿನಲ್ಲಿ ಕಬ್ಬು ಕಟಾವು ಮಾಡು ವೇಳೆ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಹಾವನ್ನು ನೋಡಿದ ರೈತರು ಭಯಭೀತರಾಗಿದ್ದು ಬಳಿಕ ಉರಗ ರಕ್ಷಕ ಸ್ನೇಕ್ ಬಾಬು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಬಳಿಕ ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದ ಸ್ನೇಕ್ ಬಾಬು ಅರಣ್ಯಾಧಿಕಾರಿಗಳ ಮಾರ್ಗದರ್ಶನ ದಂತೆ ಕಾಡಿಗೆ ಬಿಟ್ಟಿದ್ದಾರೆ.