ಜಿಲ್ಲೆ

ಬೀಚನಹಳ್ಳಿಯಲ್ಲಿ ಬೃಹತ್ ಹೆಬ್ಬಾವು ಸೆರೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಸ್ನೇಕ್ ಮಹೇಶ್‌ಕುಮಾರ್

ಮಂಡ್ಯ: ತಾಲೂಕಿನ ದುದ್ದ ಹೋಬಳಿ ಬೀಚನಹಳ್ಳಿ ಗ್ರಾಮದಲ್ಲಿ ಕಬ್ಬು ಕಟಾವು ವೇಳೆ ಕಾಣಿಸಿಕೊಂಡು ಸುಮಾರು 12 ಅಡಿ ಉದ್ದದ ಅಂದಾಜು 40 ಕೆ.ಜಿ ತೂಕದ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ.

ಗ್ರಾಮದ ಪುಟ್ಟಸ್ವಾಮಿಗೌಡ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಬಳಿಕ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಕುದರಗುಂಡಿ ಗ್ರಾಮದ ಸ್ನೇಕ್ ಮಹೇಶ್‌ಕುಮಾರ್ ಅವರಿಗೆ ಮಾಹಿತಿ ನೀಡಲಾಯಿತು.

ನಂತರ ಆಗಮಿಸಿದ ಮಹೇಶ್‌ಕುಮಾರ್ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹೆಬ್ಬಾವನ್ನು ರಕ್ಷಣೆ ಮಾಡಿದರು. ಈ ವೇಳೆ ಜನರು ಹೆಬ್ಬಾವಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಬಳಿಕ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಯಿತು. ಅರಣ್ಯ ಪಾಲಕರಾದ ಸಿ. ರಾಜೇಶ್, ಎಚ್.ಪ್ರತಾಪ್ ಮತ್ತು ಚಾಲಕ ಚಂದ್ರು, ಗ್ರಾಮಸ್ಥರಾದ ಶಂಕರ್, ರಮೇಶ್, ಪುಟ್ಟಸ್ವಾಮಿ, ಶಿವು ಇತರರಿದ್ದರು.