ವಿಜಯವಾಣಿ ಸುದ್ದಿಜಾಲ ಮಂಗಳೂರು
ಚಲಿಸುತ್ತಿದ್ದ ಕಾರು ಏಕಾಏಕಿ ನಗರದ ಮಣ್ಣಗುಡ್ಡೆ ವಾಲಿಬಾಲ್ ಮೈದಾನದ ಸಮೀಪದ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಬಂದ್ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಮೆಕ್ಯಾನಿಕ್ ಕಾರಿನ ಬೋನೆಟ್ ಎತ್ತಿ ಪರಿಶೀಲಿಸಿದಾಗ ಒಳಗೆ ಮಗಿತ್ತು ದೊಡ್ಡ ಹೆಬ್ಬಾವು.
ಬಳಿಕ ಕಾರಿನ ಮಾಲೀಕರು ತಮಗೆ ಪರಿಚಿತರಿದ್ದ ಇಬ್ಬರು ಯುವಕರನ್ನು ಕರೆಸಿ ಬೆಬ್ಬಾವನ್ನು ತೆಗೆದು ಗೋಣಿಚೀಲದಲ್ಲಿ ತುಂಬಿಸಿ ಸುರಕ್ಷಿತವಾಗಿ ಸಾಗಿಸಿದ್ದಾರೆ ಸ್ಥಳೀಯ ನಿವಾಸಿ ಪ್ರಮೋದ್ ಕೋಟ್ಯಾನ್ ಕುದ್ರೋಳಿ ಅವರು ತಿಳಿಸಿದ್ದಾರೆ.
ಕಾರಿನಲ್ಲಿ ವ್ಯಕ್ತಿಯು ಕುದ್ರೋಳಿ ಕಂಬಳದಲ್ಲಿರುವ ಫ್ಲಾೃಟ್‌ಗೆ ಬಂದಿದ್ದು, ಅಲ್ಲಿಂದ ವಾಪಸ್ ಪ್ರಯಾಣಿಸುತ್ತಿದ್ದ ವೇಳೆ ಮಣ್ಣಗುಡ್ಡೆ ಬಳಿ ಇಂಜಿನ್ ಬಂದ್ ಬಿದ್ದಿತ್ತು.