ಎಚ್.ಡಿ.ಕೋಟೆ ತಾಲೂಕಿನ ಹೆಗ್ಗಡಪುರ ಕೆರೆಯಲ್ಲಿ ಮೀನಿನ ಬಲೆಗೆ ಬಿದ್ದಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟರು. 
ಜಿಲ್ಲೆ

ಮೀನಿನ ಬಲೆಗೆ ಬಿದ್ದಿದ್ದ ಹೆಬ್ಬಾವು ರಕ್ಷಣೆ

ಲೋಕೇಶ್ ಮನು. ಡಿ

ಎಚ್.ಡಿ.ಕೋಟೆ: ತಾಲೂಕಿನ ಹೆಗ್ಗಡಪುರ ಗ್ರಾಮದ ಬಳಿ ಇರುವ ಕೆರೆಯಲ್ಲಿ ಶನಿವಾರ ಬೆಳಗ್ಗೆ ಮೀನಿನ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ಎಂಟು ಅಡಿ ಉದ್ದದ ಭಾರಿ ಗಾತ್ರ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು.

ಶನಿವಾರ ಬೆಳಗ್ಗೆ ಕೆರೆಯಲ್ಲಿ ಮೀನುಗಾರರು ಬಿಟ್ಟಿದ್ದ ಬಲೆಯನ್ನು ಮೇಲೆ ಎತ್ತುವ ಸಂದರ್ಭದಲ್ಲಿ 8 ಅಡಿ ಉದ್ದದ ಹೆಬ್ಬಾವು ಸಿಲುಕಿ ಕೊಂಡಿದ್ದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಪಟ್ಟಣದ ನಿವಾಸಿ ಸ್ನೇಕ್ ಅಲಿ ಅವರನ್ನು ಕರೆಯಿಸಿ ಬಲೆಯಲ್ಲಿ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಅರಣ್ಯಕ್ಕೆ ಬಿಟ್ಟರು.

ಡಿಆರ್ ಎಫ್‌ಓಗಳಾದ ನಿತಿನ್, ಪರಮೇಶ್, ಸಿಬ್ಬಂದಿ ಸುರೇಂದ್ರ, ಧನುಶ್, ದೀಪಕ್, ಸೋಮೇಶ್ ಇದ್ದರು.