ಜಿಲ್ಲೆ

ಹೆಬ್ಬಾವು ಸೆರೆ

ಪ್ರಸಿನ್ ಕೆ.ಆರ್

ಹಲಗೂರು: ಸಮೀಪದ ದಳವಾಯಿಕೋಡಿಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬೋರಯ್ಯ ಅವರ ಜಮೀನಿನಲ್ಲಿ ಬುಧವಾರ 9 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ.

ಗ್ರಾಮದ ವೆಂಕಟೇಶ್ ಅವರು ಜಮೀನಿನಲ್ಲಿ ಹಸುಗಳಿಗೆ ಸೀಮೆ ಹುಲ್ಲು ಕುಯ್ಯಲು ಹೋಗಿದ್ದರು. ಸೀಮೆ ಹುಲ್ಲಿನ ನಡುವೆ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ಕಂಡು ಹಲಗೂರಿನ ಸ್ನೇಕ್ ಜಗದೀಶ್ ಅವರಿಗೆ ತಿಳಿಸಿದ್ದಾರೆ.

ಜಗದೀಶ್ ಮತ್ತು ಸಹಾಯಕ ಕೃಷ್ಣ ಹಾವನ್ನು ಸೆರೆ ಹಿಡಿದು ಬಸವನಬೆಟ್ಟ ಅರಣ್ಯ ಪ್ರದೇಶಕ್ಕೆ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾದರು.