ಸುಳ್ಯ: ರಬ್ಬರ್ ತೋಟದಲ್ಲಿ ಕಾಣ ಸಿಕ್ಕಿದ ಭಾರಿ ಗಾತ್ರದ ಹೆಬ್ಬಾವನ್ನು ಕೆಲಸಗಾರರು ಹಿಡಿದು ಕಾಡಿಗೆ ಬಿಟ್ಟ ಘಟನೆ ಬುಧವಾರ ಬಡ್ಡಡ್ಕದಲ್ಲಿ ನಡೆದಿದೆ. ಬಡ್ಡಡ್ಕದ ದಿನೇಶ್ ಅವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಸಿಕ್ಕಿದ್ದು ಸ್ಥಳೀಯ ರಬ್ಬರ್ ಟ್ಯಾಪರ್ಸ್‌ನವರು ಹಿಡಿದು ಕಾಡಿಗೆ ಬಿಟ್ಟರು.