ಹುಬ್ಬಳ್ಳಿ: ಇಲ್ಲಿಯ ಸನಾ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಗುರುವಾರ ಇಂಟರ್ ನ್ಯಾಷನಲ್ ಪ್ಯಾರಾಮೆಡಿಕ್ಸ್ ಡೇ ಅನ್ನು ಅರ್ಥರ್ಪೂಣವಾಗಿ ಆಚರಿಸಲಾಯಿತು.
ಆರೋಗ್ಯ ಕ್ಷೇತ್ರದಲ್ಲಿ ಪ್ಯಾರಾಮೆಡಿಕ್ಸ್ ಪಾತ್ರ ಮತ್ತು ನೈತಿಕತೆ, ಸಹಾನುಭೂತಿ ಹಾಗೂ ಪ್ರಾಯೋಗಿಕ ಪರಿಣತಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದು ತಜ್ಞರು ಹೇಳಿದರು.
ಅತಿಥಿಗಳಾಗಿದ್ದ ಡಾ. ಉಮೇಶ್ ಹಳ್ಳಿಕೇರಿ ಅವರು ಮಾತನಾಡಿ, ಪ್ಯಾರಾಮೆಡಿಕ್ಸ್ ಆರೋಗ್ಯ ವ್ಯವಸ್ಥೆಯ ಮುಖ್ಯ ಭಾಗವಾಗಿದ್ದಾರೆ. ಇಂದಿನ ತಾಂತ್ರಿಕ ಜ್ಞಾನದೊಡನೆ ಮಾನವೀಯ ಮೌಲ್ಯಗಳು ಹಾಗೂ ಸೇವಾಭಾವವೂ ಅಗತ್ಯ ಎಂದು ಹೇಳಿದರು.
ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ಅಶ್ರಫ್ ಅಲಿ ಅವರು, ಪ್ಯಾರಾಮೆಡಿಕಲ್ ಶಿಕ್ಷಣವು ಮಾನವಸೇವೆಯ ಪವಿತ್ರ ಭಾಗವಾಗಿದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಪರಿಶ್ರಮ ಹಾಗೂ ನೈತಿಕ ಮೌಲ್ಯಗಳಿಗೆ ಮಹತ್ವ ನೀಡಬೇಕು ಎಂದರು.
ಎಕ್ಸಿಕ್ಯೂಟಿವ್ ಟ್ರಸ್ಟಿ ಅಯೂಬ್ ಸವಣೂರು ಅವರು, ಪ್ಯಾರಾಮೆಡಿಕಲ್ ವೃತ್ತಿಯ ಸಾಮಾಜಿಕ ಹೊಣೆಗಾರಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ, ಶಿಕ್ಷಣದ ಜೊತೆಗೆ ಮೌಲ್ಯಗಳ ಅಭಿವೃದ್ಧಿಗೂ ಮಹತ್ವ ನೀಡುವ ನಿಟ್ಟಿನಲ್ಲಿ ಸಂಸ್ಥೆ ಬದ್ಧವಾಗಿದೆ ಎಂದರು.
ಪ್ರಾಚಾರ್ಯ ಮಹೇಶ್ ಅವರು ಕಾಲೇಜಿನ ಶಿಸ್ತು, ಪ್ರಾಯೋಗಿಕ ತರಬೇತಿ ಮತ್ತು ಬೌದ್ಧಿಕ ವಿಚಾರಗಳ ಬಗ್ಗೆ ಮಾತನಾಡಿದರು.
ಟ್ರಸ್ಟಿ ಫರಾಜ್ ಅತ್ತಾರ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ಸಂಸ್ಥೆಯ ಅಭಿವೃದ್ಧಿಗೆ ತಮ್ಮ ನಿರಂತರ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು.
ಡಾ. ಮಹಾದೇವಿ ಓಜಾ ಅವರು, ಸ್ವಾಭಿಮಾನ, ನಾಯಕತ್ವ ಮತ್ತು ಸೇವಾ ಮನೋಭಾವದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೇರಣೆ ನೀಡಿದರು. ಸುಬಹತ್ ಕಾರ್ಯಕ್ರಮ ನಿರ್ವಹಿಸಿದರು.