ತಾಳುಬೆಟ್ಟ ಮಾರ್ಗದಲ್ಲಿ ಬಸ್ ಮಗುಚಿದ್ದ ಸ್ಥಳಕ್ಕೆ ಎಇಇ ಚಿನ್ನಣ್ಣ ತೆರಳಿ ಪರಿಶೀಲಿಸಿದರು.  
ಜಿಲ್ಲೆ

ಬಸ್ ಅಪಘಾತ ಸ್ಥಳಕ್ಕೆ ಪಿಡಬ್ಲುೃಡಿ ಅಧಿಕಾರಿಗಳು ಭೇಟಿ

ಹನೂರು: ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟ ಮಾರ್ಗದ ಶನೈಶ್ಚರ ದೇಗುಲ ಸಮೀಪದ ತಿರುವಿನಲ್ಲಿ  ಸಾರಿಗೆ ಬಸ್ ಮಗುಚಿದ್ದ ಸ್ಥಳಕ್ಕೆ   ಪಿಡಬ್ಲುೃಡಿ ಅಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿದರು.

ಎಇಇ ಚಿನ್ನಣ್ಣ ಹಾಗೂ ಎಇ ಮಹೇಶ್ ಅವರು ಸ್ಥಳಕ್ಕೆ ಆಗಮಿಸಿ ಬಸ್ ಅಪಘಾತಕ್ಕೆ ಕಾರಣ ಪರಿಶೀಲಿಸಿದರು. ಆಸುಪಾಸಿನ ರಸ್ತೆಯ ಸ್ಥಿತಿಯ ಸುಧಾರಣೆ ಹಾಗೂ ದುರಸ್ತಿಗೊಂಡಿರುವ ಕಿರು ಸೇತುವೆಯ ರಿಪೇರಿ ಹಾಗೂ ಈ ಮಾರ್ಗದಲ್ಲಿ ಅಪಘಾತವನ್ನು ತಡೆಟಗಟ್ಟುವ ಸಲುವಾಗಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದರು.