ಪಿಡಬ್ಲುೃಡಿ ಗುತ್ತಿಗೆದಾರರ ಸಂಘದ ಪದಗ್ರಹಣ ಸಮಾರಂಭವನ್ನು ಶಾಸಕ ರಾಜೇಶ್ ನಾಕ್ ಉದ್ಘಾಟಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮೊದಲಾದವರಿದ್ದರು. 
ಜಿಲ್ಲೆ

ಗುಣಮಟ್ಟದ ಕಾಮಗಾರಿಯಿಂದ ಹೆಚ್ಚು ಅವಕಾಶ : ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅಭಿಮತ : ಗುತ್ತಿಗೆದಾರರ ಸಂಘದ ಪದಗ್ರಹಣ

ಸೌಮ್ಯ ಆರ್

ಬಂಟ್ವಾಳ: ಸಂಘಟನೆಯ ಮೂಲಕ ಗುತ್ತಿಗೆದಾರರ ಬೇಡಿಕೆ ಈಡೇರಿಕೆಗೆ ಅವಕಾಶಗಳು ಕೂಡಿ ಬರಲಿ. ಗುಣಮಟ್ಟದ ಕಾಮಗಾರಿಯ ಮೂಲಕ ಹೆಚ್ಚು-ಹೆಚ್ಚು ಕೆಲಸಗಳು ಸಿಗುವಂತಾಗಲಿ. ಸಂಘದ ಮೂಲಕ ಗುತ್ತಿಗೆದಾರರು ಆರ್ಥಿಕವಾಗಿ ಸದೃಢರಾಗಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾರೈಸಿದರು.

ಬಿ.ಸಿ.ರೋಡ್‌ನಲ್ಲಿ ತಾಲೂಕು ಪಿಡಬ್ಲುೃಡಿ ಗುತ್ತಿಗೆದಾರರ ಸಂಘದ ಕಾರ್ಯಕಾರಿಣಿ ಸಮಿತಿ ಪದಗ್ರಹಣ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಗುತ್ತಿಗೆದಾರರಿಗೆ ಅನೇಕ ಸಮಸ್ಯೆಗಳಿವೆ. ತಾಲೂಕಿನ ಅಭಿವೃದ್ಧಿಯಲ್ಲಿ ಗುತ್ತಿಗೆದಾರರ ಪಾತ್ರ ಕೂಡ ಬಹಳಷ್ಟು ಇದೆ. ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಮಾಡಿ ಮುಗಿಸಿದಾಗ ಜನರಿಗೆ ಸಹಕಾರಿಯಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ನಾಯ್ಕ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜಿ.ಕೆ.ನಾಯಕ್, ತಾ.ಪಂ ಇಒ ಮಹೇಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜೈ ಪ್ರಕಾಶ್, ಕಿರಿಯ ಇಂಜಿಯರ್‌ಗಳಾದ ಕೃಷ್ಣ ಮಾನಪ್ಪ, ಜಗದೀಶ್ ನಿಂಬಾಳ್ಕರ್, ಸಹಾಯಕ ಇಂಜಿನಿಯರ್ ಗೌರಿ ದಿಗಂಬರ ಗಾಂವ್ಕರ್, ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ನಾಗೇಶ್ ಕುಲಾಲ್, ಕಾರ್ಯದರ್ಶಿ ಸಮೀರ್ ಪಜೀರ್, ಸಂಘದ ಕಾರ್ಯದರ್ಶಿ ಕರುಣಾಕರ ಪಿ, ಗುತ್ತಿಗೆದಾರ ಎ.ಎಚ್.ಖಾದರ್ ಉಪಸ್ಥಿತರಿದ್ದರು. ಹಿರಿಯ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಎಸ್.ನಾರಾಯಣ ಸ್ವಾಗತಿಸಿದರು. ಬಾಲಕೃಷ್ಣ ಚೆರ್ಕಳ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.