ಲೋಕಾಯುಕ್ತರು ದಾಳಿ ನಡೆಸಿರುವ ರಾಯಚೂರಿನ ಆಶಾಪುರ ರಸ್ತೆಯ ಆರ್.ಆರ್.ಕಾಲನಿಯಲ್ಲಿನ ಲೋಕೋಪಯೋಗಿ ಇಲಾಖೆ ಎಇಇ ಜಿ.ಎನ್.ಪ್ರಕಾಶ ಮನೆ. 
ಜಿಲ್ಲೆ

ಪಿಡಬ್ಲುೃಡಿ ಎಇಇ ಜಿ.ಎನ್. ಪ್ರಕಾಶ ಆಸ್ತಿ ದಾಖಲೆಗಳ ತಪಾಸಣೆ

Gangavati - Desk - Veeresh S Ullagaddi

ರಾಯಚೂರು: ಸ್ಥಳೀಯ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎನ್. ಪ್ರಕಾಶ ಮನೆ ಮೇಲೆ ಬುಧವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಭ್ರಷ್ಟಾಚಾರ, ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿತ್ತು

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ನಗರದ ಆಶಾಪುರ ರಸ್ತೆಯ ಆರ್.ಆರ್.ಕಾಲನಿಯಲ್ಲಿರುವ ಜಿ.ಎನ್.ಪ್ರಕಾಶ ಮನೆ ಮೇಲೆ ಲೋಕಾಯುಕ್ತ ಎಸ್ಪಿ ರಾಮ್ ಅರಸಿದ್ಧಿ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ರಾಯಚೂರು ಮತ್ತು ಮಾನ್ವಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಆಗಿ ಕಾರ್ಯನಿರ್ವಹಿಸಿದ್ದ ಜಿ.ಎನ್.ಪ್ರಕಾಶ ಮೇಲೆ ಭ್ರಷ್ಟಾಚಾರ, ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿದ್ದು, ಕಳೆದ ಒಂದು ವರ್ಷದಿಂದ ಯಾವುದೇ ಪೋಸ್ಟಿಂಗ್ ಇಲ್ಲದೆ ಖಾಲಿಯಿದ್ದರು. ಪರಿಶೀಲನೆ ವೇಳೆ ಮನೆಯಲ್ಲಿ ಬಂಗಾರದ ಆಭರಣ ಮತ್ತು ಆಸ್ತಿ ಪತ್ರಗಳು ದೊರೆತಿವೆ ಎಂದು ಮೂಲಗಳು ತಿಳಿಸುತ್ತಿದ್ದು, ದಾಳಿ ನಡೆಸಿರುವ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದರು.