???????????????????????????????????? 
ಜಿಲ್ಲೆ

ನೌಕರರ ವಿರುದ್ಧ ಕ್ರಮವಲ್ಲ: ಕೆಎಸ್‍ಆರ್‍ಟಿಸಿ ಡಿಸಿ ವೀರೇಶ್

madikerimailmanju

ಚಿಕ್ಕಮಗಳೂರು: ಜನಸಂಚಾರಕ್ಕೆ ಸರ್ಕಾರ ಪರ್ಯಾಯವಾಗಿ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆಯೇ ಹೊರತು ನೌಕರರ ವಿರುದ್ಧದ ಕ್ರಮವಲ್ಲ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ತಿಳಿಸಿದರು. ವಿಜಯವಾಣಿ ಜತೆ ಮಾತನಾಡಿದ ಅವರು, ಕೆಲವು ನೌಕರರನ್ನು ಬಳಸಿಕೊಂಡು ಚಿಕ್ಕಮಗಳೂರು-ಆಲ್ದೂರು, ಕಡೂರು-ಚಿಕ್ಕಮಗಳೂರು ಹಾಗೂ ಮೂಡಿಗೆರೆ-ಕೊಟ್ಟಿಗೆಹಾರ ನಡುವೆ ಬಸ್‍ಗಳು ಸಂಚರಿಸಿವೆ. ಸಂಚಾರ ವ್ಯವಸ್ಥೆಗೆ ಅಗತ್ಯ ಪೊಲೀಸ್ ರಕ್ಷಣಾ ವ್ಯವಸ್ಥೆಯನ್ನು ಸಹ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ತರಬೇತಿಯಲ್ಲಿರುವ ಚಾಲಕ, ನಿರ್ವಾಹಕರು, ಮೆಕ್ಯಾನಿಕ್‍ಗಳು ಸೇರಿದಂತೆ ನೌಕರರು ಮುಷ್ಕರದಲ್ಲಿ ಭಾಗವಹಿಸಲು ಅವಕಾಶವಿಲ್ಲದಿರುವುದರಿಂದ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.