ಜಿಲ್ಲೆ

ಪುತ್ತೂರು ತಾಲೂಕು ಪಂಚಾಯಿತಿ 2022-23ನೇ ಸಾಲಿನ ಜಮಾಬಂದಿ

Mangaluru - Nishantha Narayana

ಪುತ್ತೂರು: ತಾಲೂಕು ಪಂಚಾಯಿತಿ 2022-23ನೇ ಸಾಲಿನ ಜಮಾಬಂದಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕುಮಾರ್ ನೇತೃತ್ವದಲ್ಲಿ ಮಂಗಳವಾರ ನಡೆಯಿತು.

ತಾಲೂಕು ಪಂಚಾಯಿತಿಯ ಸ್ಥಳೀಯ ಸಂಪನ್ಮೂಲದಿAದ 376116ರೂ., ಯೋಜನೆಗಳು 996747874ರೂ. ಸೇರಿ ಒಟ್ಟು 997123990ರೂ. ಜಮೆಯಾಗಿದೆ. 2022-23ರಲ್ಲಿ 996717990ರೂ ಬಿಡುಗಡೆ ಮಾಡಲಾಗಿದ್ದು, 122481942ರೂ ಉಳಿಕೆಯಾಗಿದೆ. ತಾಲೂಕು ಪಂಚಾಯಿತಿ ಆನಿರ್ಭಂದಿತ ಅನುದಾನ 17671505 ರೂ. ನಲ್ಲಿ 29 ಕಾಮಗಾರಿ ಪೂರ್ಣಗೊಂಡಿದೆ. ಅಧಿಭಾರ ಶುಲ್ಕದಲ್ಲಿ 3642370ರೂ. ವೆಚ್ಚದಲ್ಲಿ 7 ಕಾಮಗಾರಿ ನಡೆಸಿ 17 ಬಾಕಿ ಉಳಿದಿದೆ. 15ನೇ ಹಣಕಾಸು 8566623 ರೂ ಅನುದಾನದಲ್ಲಿ 24 ಕಾಮಗಾರಿ ಪೂರ್ಣಗೊಂಡು 13 ಕಾಮಗಾರಿ ಬಾಕಿಉಳಿದಿದೆ. ಆರೋಗ್ಯ ಇಲಾಖೆಯ 500000ರೂ.ನಲ್ಲಿ ನಾಲ್ಕು ಕಾಮರಿಗಳನ್ನು ಪೂರ್ಣ ಮಾಡಲಾಗಿದೆ. ನೀರು ಮತ್ತು ನೈರ್ಮಲ್ಯದಲ್ಲಿ 400000ರೂ ನಲ್ಲಿ 2 ಕಾಮಗಾರಿಯನ್ನು ಪೂರ್ಣಮಾಡಿರುವ ಮಾಹಿತಿಯನ್ನು ನೀಡಿದರು. ಕುಂದುಕೊರತೆಗಳ ಬಗ್ಗೆ ಸುಮಾರು 16 ಅರ್ಜಿಗಳು ಬಂದಿದ್ದು, ನಿಯಮಾನುಸಾರ ಕ್ರಮವನ್ನು ಕೈಗೊಳ್ಳಲಾಗಿದೆ. ಮಾಹಿತಿ ಹಕ್ಕು ಅಧಿನಿಯಮದಲ್ಲಿ ಸುಮಾರು 31 ಮಂದಿ ಅರ್ಜಿಯನ್ನು ಹಾಕಿದ್ದು, ಮಾಹಿತಿಯನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಯಿತು.

ತಾಲೂಕು ಯೋಜನಾಧಿಕಾರಿ ಸುಕನ್ಯಾ, ಉದ್ಯೋಗ ಖಾತ್ರಿಯೋಜನೆಯ ಸಹಾಕಯ ನಿರ್ದೇಶಕಿ ಶೈಲಜಾ ಎ. ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಕಾರ್ಯದರ್ಶಿ ಸುರೇಶ್ ಪೂಜಾರಿ ವರದಿ ಮಂಡಿಸಿದರು.