ಜಿಲ್ಲೆ

ವಾರದ ಸಂತೆ ಕಿಲ್ಲೆ ಮೈದಾನದಲ್ಲೇ - ಚುನಾವಣೆಗಾಗಿ ಸ್ಥಳ ಬದಲಾಯಿಸಿಲ್ಲ ಎಂದು ಶಾಸಕರ ಸ್ಪಷ್ಟನೆ

Mangaluru - Nishantha Narayana

ಪುತ್ತೂರು: ಕಿಲ್ಲೆ ಮೈದಾನದಲ್ಲಿ ಸೋಮವಾರ ನಡೆಯುತ್ತಿದ್ದ ಸಂತೆಯನ್ನು ಚುನಾವಣೆಯ ಹಿನ್ನೆಲೆಯಲ್ಲಿ ನಗರಸಭೆ ಅಽಕಾರಿಗಳು ರದ್ದು ಮಾಡಿದ್ದಾರೆಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅಽಕಾರಿಗಳಲ್ಲಿ ಮಾತನಾಡಿ ಗೊಂದಲಕ್ಕೆ ತೆರೆಯೆಳೆದಿದ್ದಾರೆ.


ಪುತ್ತೂರು ನಗರಸಭಾ ವ್ಯಾಪ್ತಿಯ ಮತಗಟ್ಟೆಯಿಂದ ೨೦೦ ಮೀಟರ್ ದೂರದಲ್ಲಿ ಕಿಲ್ಲೆ ಮೈದಾನವಿರುವ ಕಾರಣ ನೀತಿ ಸಂಹಿತೆಯ ನೆಪದಲ್ಲಿ ವಾರದ ಸಂತೆಯನ್ನು ನಗರ ಸಭೆಯ ಅಽಕಾರಿಗಳು ರದ್ದು ಮಾಡಿದ್ದರು. ಆದರೆ ಈ ಬಗ್ಗೆ ನಗರಸಭೆಯಿಂದ ಅಽಕೃತ ಮಾಧ್ಯಮ ಹೇಳಿಕೆಯನ್ನು ನೀಡಿರಲಿಲ್ಲ. ರದ್ದು ಮಾಡಿದ ಸಂದೇಶಗಳು ಓಡಾಡುತ್ತಿದ್ದುದನ್ನು ಗಮನಿಸಿದ ಸಂತೆ ವ್ಯಾಪಾರಿಗಳು ಶಾಸಕರ ಗಮನಕ್ಕೆ ತಂದಿದ್ದರು.


ತಕ್ಷಣ ಸ್ಪಂದಿಸಿದ ಶಾಸಕರು ಅಽಕಾರಿಗಳ ಜತೆ ಈ ವಿಚಾರದಲ್ಲಿ ಮಾತುಕತೆ ನಡೆಸಿ ವಾರದ ಸಂತೆ ಕಿಲ್ಲೆ ಮೈದಾನದಲ್ಲೇ ನಡೆಯುತ್ತದೆ ಅದಕ್ಕೆ ಯಾವುದೇ ಅಡಚಣೆಯಾಗಬಾರದು. ರೈತರಿಗೆ ಹಾಗೂ ಬಡವರಿಗೆ ಗೊಂದಲ ಏರ್ಪಡಿಸುವ ಕಾರ್ಯವನ್ನು ಮಾಡಬಾರದು. ಕಿಲ್ಲೆ ಮೈದಾನದಲ್ಲೇ ಸಂತೆ ನಡೆಸಲು ಅವಕಾಶ ನೀಡಬೇಕು ಎಂದು ಸೂಚನೆಯನ್ನು ನೀಡಿದ್ದಾರೆ. ಇದರಂತೆ ಕಿಲ್ಲೆ ಮೈದಾನದಲ್ಲೇ ಸಂತೆ ವ್ಯಾಪಾರ ನಡೆಯಲಿದೆ.


ವಿಚಾರ ಗಮನಕ್ಕೆ ಬಂದಿಲ್ಲ
ಚುನಾವಣಾ ವಿಚಾರಕ್ಕಾಗಿ ಮಾಡುವ ಬದಲಾವಣೆಗಳನ್ನು ಜಿಲ್ಲಾ ಚುನಾವಣಾಽಕಾರಿ ಗಮನಕ್ಕೆ ತರುವ ಕಾರ್ಯವನ್ನು ತಳಮಟ್ಟದ ಅಽಕಾರಿಗಳು ನಡೆಸಬೇಕಾಗಿದೆ. ಸಂತೆ ರದ್ದಾದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ವಿಜಯವಾಣಿ ಜಿಲ್ಲಾ ಚುನಾವಣಾಽಕಾರಿಯಲ್ಲಿ ಸ್ಪಷ್ಟೀಕರಣ ಪಡೆಯಲು ಮುಂದಾಗಿದ್ದು, ಈ ಸಂದರ್ಭ ಅಂತಹ ಯಾವುದೇ ವಿಚಾರ ಗಮನಕ್ಕೆ ಬಂದಿಲ್ಲ. ಅಽಕೃತ ಮಾಹಿತಿಯಾಗಿದ್ದರೆ ಪ್ರಕಟಣೆಯನ್ನು ಇಲಾಖೆ ಹೊರಡಿಸುತ್ತದೆ. ಸಾಮಾಜಿಕ ಜಾಲತಾಣದ ಮಾಹಿತಿಗೆ ಜನರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಹೇಳಿದ್ದರು.