ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಸುದ್ದಿಗೋಷ್ಠಿ 
ಜಿಲ್ಲೆ

ಜೈ ಶ್ರೀರಾಮ್‌ ಅಲ್ಲ ಜೈ ಸ್ವಾಹಾ ಫೋಷಣೆ ಸಮಂಜಸ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಲೇವಡಿ
ಪುತ್ತೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ರಾಮಭಕ್ತರು ಕಾಣಿಕೆಯಾಗಿ ನೀಡಿದ ದೇಣಿಗೆ ದುರುಪಯೋಗ ಮಾಡಿದವರಿಗೆ ಜೈ ಶ್ರೀರಾಮ್‌ ಎಂದು ಕೂಗುವ ಅರ್ಹತೆಯಿಲ್ಲ. ಅವರು ಜೈ ಸ್ವಾಹಾ ಫೋಷಣೆ ಹಾಕುವುದು ಹೆಚ್ಚು ಸಮಂಜಸ. ಅಯೋಧ್ಯೆ ರಾಮಜನ್ಮಭೂಮಿ ಬಾಬರಿ ಮಸೀದಿ ವಿವಾದವನ್ನು ಕಳೆದ 40 ವರ್ಷಗಳಿಂದ ರಾಜಕೀಯ ಲಾಭಕ್ಕಾಗಿ ಬಳಸಿದ್ದು, ಮತ ಧೃವೀಕರಣದ ಜತೆಗೆ ಹಣ ಮಾಡುವ ದಂಧೆಯಾಗಿಸಿದ್ದಾರೆ. 1989ರಲ್ಲಿ ದೇಶಾದ್ಯಂತ ರಾಮ ಶಿಲಾಪೂಜನ ಕಾರ್ಯಕ್ರಮದಲ್ಲಿ ಪ್ರತಿ ಮನೆಯಿಂದ ಕನಿಷ್ಠ 1.25 ರೂ., ಐದು ಮತ್ತು ಹತ್ತು ರೂಪಾಯಿಯ ಕೂಪನ್‌ ಮೂಲಕ 1,400 ಕೋಟಿ ರೂ.ಗೂ ಅಧಿಕ ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣಕ್ಕೆ ಯಾವ ರಶೀದಿಯನ್ನು ನೀಡಿಲ್ಲ ಮತ್ತು ಇಂದಿನವರೆಗೆ ದೇಶಕ್ಕೆ ಲೆಕ್ಕಾಚಾರವೇ ಇಲ್ಲದಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಎಂಟು ಜನ ಸೇರಿ ಇಷ್ಟು ದೊಡ್ಡ ಪ್ರಮಾಣದ ಲೂಟಿಯನ್ನು ನಡೆಸುವುದಕ್ಕೆ ಸಾಧ್ಯವಿಲ್ಲ. ಪರದೆಯ ಹಿಂದೆ ಪರಿವಾರದ ದೊಡ್ಡ ದೊಡ್ಡವರು ಶಾಮೀಲಾಗಿದ್ದಾರೆ. ಎಸ್‌ಐಟಿ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಅಯೋಧ್ಯೆಯ ರಾಮ ಮಂದಿರದ ಹುಂಡಿ ಕಳವು ಪ್ರಕರಣದ ತನಿಖೆ ಸಮಗ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆದು, ಲೂಟಿಯ ಸೂತ್ರದಾರರನ್ನು ಕಾನೂನಿನ ಕೈಗೆ ಒಪ್ಪಿಸಿ, ರಾಮನನ್ನೂ, ರಾಮ ಮಂದಿರವನ್ನೂ ಲೂಟಿಕೋರರಿಂದ ರಕ್ಷಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ, ವಕ್ತಾರ ರವೀಂದ್ರ ರೈ ನೆಕ್ಕಿಲು, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್‌ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಅಮರನಾಥ್‌ ಗೌಡ ಇದ್ದರು.