ಪುತ್ತೂರು: ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಲ್ಲಿರುವ ಸಮಸ್ಯೆಗಳ ದೃಷ್ಟಿಯಲ್ಲಿ, ಶಿಕ್ಷಣದ ಆಮೂಲಾಗ್ರ ಬದಲಾವಣೆಯಲ್ಲಿ, ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಆಡಳಿತದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ. ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಅತಿ ಅನಿವಾರ್ಯ ಅನುದಾನ ಮೀಸಲಿಟ್ಟಿದೆ ಹೊರತು ಉಳಿದಂತೆ ಸಂಪೂರ್ಣ ವಿಫಲವಾಗಿದೆ. ಪ್ರದೇಶಾಭಿವೃದ್ಧಿ ನಿಽಯಿಂದ ಒಂದು ನಯಾಪೈಸೆ ಬಿಡುಗಡೆಯಾಗಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರದ ಕೊಡುಗೆ ಶೂನ್ಯವಾಗಿದೆ ಎಂದು ಶಿಕ್ಷಕರ ಕ್ಷೇತ್ರದ ದ.ಕ. ಜಿಲ್ಲಾ ಚುನಾವಣಾ ಸಂಚಾಲಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಸುಳ್ಯ, ಪುತ್ತೂರು, ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ವಿಚಾರದಲ್ಲಿ ಆಗಿರುವ ಕೆಲಸಗಳ ಪರಿಶೀಲನೆಯನ್ನು ನಡೆಸುತ್ತಿದ್ದೇವೆ. ಪ್ರತಿಯೊಬ್ಬರ ಸಂಪರ್ಕದ ದೃಷ್ಟಿಯಿಂದ ೨೫ ಮತಕ್ಕೆ ಒಬ್ಬರಂತೆ ಪ್ರಮುಖರನ್ನು ಮಾಡಿ ಸಂಪರ್ಕ ಕಾರ್ಯ ಮಾಡಲಾಗುತ್ತಿದೆ. ಸಮಾಜದ ಕೆನೆಪದರಿನ ಚಿಂತಕರು, ಶಿಕ್ಷಕರನ್ನು ಪ್ರತಿನಿಽಸುವ ವಿಧಾನ ಪರಿಷತ್ ಅತ್ಯಂತ ಮಹತ್ವಪೂರ್ಣವಾದ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ೧೯೮೮ರಿಂದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಕಳೆದ ಒಂದು ಬಾರಿಯನ್ನು ಹೊರತು ಪಡಿಸಿ ಬಿಜೆಪಿಗೆ ನಿರಂತರ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ. ವಿರೋಧ ಪಕ್ಷಕ್ಕೆ ವಿಧಾನ ಪರಿಷತ್‌ನಲ್ಲಿ ಬಹುಮತ ಇದ್ದ ಕಾರಣದಿಂದ ಸರ್ಕಾರದ ಜನವಿರೋಽ ಧೋರಣೆಗಳಿಗೆ ಅಂಕುಶ ಹಾಕುವ ಕಾರ್ಯವಾಗಿದೆ. ವಿಧಾನ ಪರಿಷತ್‌ಗೆ ಬಲ ನೀಡುವ ದೃಷ್ಟಿಯಿಂದ ಶಿಕ್ಷಕರು ಹಾಗೂ ಪದವೀದರರು ಬಿಜೆಪಿಗೆ ಬೆಂಬಲವನ್ನು ನೀಡಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಚುನಾವಣಾ ಸಹ ಸಂಚಾಲಕ ವಿಕಾಸ್ ಪುತ್ತೂರು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ. ಜಿ. ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.