ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಮಾಧ್ಯಮದೊಂದಿಗೆ ಮಾತನಾಡಿದರು. 
ಜಿಲ್ಲೆ

ಯಲಹಂಕ ಶಾಸಕ ವಿಶ್ವನಾಥ್‌ ಬಹಿರಂಗ ಕ್ಷಮೆಯಾಚಿಸಲಿ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಪುತ್ತೂರು ಒಕ್ಕಲಿಗ ಗೌಡ ಸಂಘ ಒತ್ತಾಯ
ಪುತ್ತೂರು: ಮಂಗಳೂರು ಕಡೆಯ ಎಲ್ಲ ಗೌಡರು ಒಕ್ಕಲಿಗರಲ್ಲ ಎಂದು ಹೇಳಿಕೆ ನೀಡಿರುವ ಬೆಂಗಳೂರಿನ ಯಲಹಂಕದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಜಿಲ್ಲಾಮಟ್ಟದ ಸಂಘಟನೆಯೊಂದಿಗೆ ಕಾನೂನು ಮೂಲಕ ಅಥವಾ ಬೇರೆ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಎಚ್ಚರಿಸಿದ್ದಾರೆ.
ಮಾಧ್ಯಮದೊಂದಿಗೆ ಮಾನತಾಡಿದ ಅವರು, ಓರ್ವ ಜವಾಬ್ದಾರಿಯುತ ಶಾಸಕರಾಗಿ ಎಸ್‌.ಆರ್‌ ವಿಶ್ವನಾಥ್‌ ಕರಾವಳಿ ಭಾಗದ ಗೌಡ ಸಮುದಾಯವನ್ನು ಒಕ್ಕಲಿಗರಲ್ಲ ಎಂದಿರುವುದು ಸರಿಯಲ್ಲ. ಹೇಳಿಕೆಯನ್ನು ತಕ್ಷಣ ಹಿಂಪಡೆದು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಒಕ್ಕಲಿಗ ಸಮಾಜವನ್ನು ದಕ್ಷಿಣ ಕನ್ನಡದಲ್ಲಿ ಆದಿಚುಂಚನಗಿರಿ ಶ್ರೀಗಳು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೇಳಿಕೆ ಹಿಂಪಡೆಯದಿದ್ದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶ್ರೀಧರ್‌ ಗೌಡ ಪಾಣತ್ತಿಲ, ಮಾಜಿ ಅಧ್ಯಕ್ಷ ರವಿ ಮುಂಗ್ಲಿಮನೆ, ವಿಶ್ವನಾಥ ಗೌಡ ಕೆಯ್ಯೂರು, ಶ್ರೀಧರ್‌ ಗೌಡ ಕಣಜಾಲು ಉಪಸ್ಥಿತರಿದ್ದರು.